ಬೆಂಗಳೂರು: ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ಧ್ರುವ್ ಜುರೆಲ್ ಅವರು ಆಯ್ಕೆಯಾಗಲಿದ್ದಾರೆಂದು ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ
“ಭಾರತ ಟಿ20 ವಿಶ್ವಕಪ್ ತಂಡಕ್ಕೆ ವಿಕೆಟ್ ಕೀಪರ್ಗಳಿಗೆ ಸಾಕಷ್ಟು ಆಯ್ಕೆಗಳೀವೆ. ಈ ಸಲ ಐಪಿಎಲ್ನಲ್ಲಿ ಯಶಸ್ವಿ ಜೈಸ್ವಾಲ್ಗೆ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶವಿದೆ. ಇನ್ನು ಜೋಸ್ ಬಟ್ಲರ್ ಕೂಡ ಈ ಬಾರಿ ಪ್ರಾಬಲ್ಯ ಸಾಧಿಸುವ ಸಾದ್ಯತೆ ಇದೆ. ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗಲು ಸಂಜು ಸ್ಯಾಮ್ಸನ್ಗೂ ಚಾನ್ಸ್ ಇದೆ. ಇದರ ಜೊತೆಗೆ ಧ್ರುವ್ ಜುರೆಲ್ಗೂ ಕೂಡ ಅವಕಾಶವಿದೆ,” ಎಂದು ಆಕಾಶ್ ಚೋಪ್ರಾ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಐಪಿಎಲ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಧ್ರುವ್ ಜುರೆಲ್ ಆಡುತ್ತಿದ್ದಾರೆ. ಇವರಿಬ್ಬರ ಜೊತೆಗೆ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಅವರು ಕೂಡ ಈ ತಂಡದಲ್ಲಿದ್ದು 2008ರ ಬಳಿಕ ಎರಡನೇ ಬಾರಿ ಪ್ರಶಸ್ತಿ ಗೆಲ್ಲಲು ರಾಜಸ್ಥಾನ್ ರಾಯಲ್ಸ್ ಎದುರು ನೋಡುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಧ್ರುವ್ ಜುರೆಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈ ಸರಣಿಯನ್ನು ಭಾರತ 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು.
ಸತತ 14 ತಿಂಗಳುಗಳ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿರುವ ರಿಷಭ್ ಪಂತ್, 2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಆದರೆ, ಈ ಬಾರಿ ಟಿ20 ವಿಶ್ವಕಪ್ಗೆ ಅವರು ಸಂಪೂರ್ಣ ಫಿಟ್ ಇರಬಹುದೆಂಬ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಹಾಗಾಗಿ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಸ್ಥಾನಕ್ಕೆ ಸಂಜು ಹಾಗೂ ಜುರೆಲ್ ನಡಿವೆ ಸ್ಪರ್ಧೆ ನಡೆಯಲಿದೆ ಎಂದು ಆಕಾಶ್ ಚೋಪ್ರಾ ಅನಿಸಿಕೆ ವ್ಯಕ್ತಪಡಿಸಿದ್ದಾರೆ.