ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸದ್ಯ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಪಾಕ್ ನಿಂದ ವಾಪಸ್ ಆಗಿ ಮಗನ ಜೊತೆ ವಾಸವಾಗಿರುವ ಸಾನಿಯಾ ಮಿರ್ಜಿ ಇದೀಗ ಖ್ಯಾತ ನಟನೆ ಜೊತೆ 2ನೇ ಮದುವೆಯಾಗಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 14 ವರ್ಷಗಳ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವು ವರ್ಷಗಳ ಹಿಂದೆ ದಂಪತಿ ವಿಚ್ಚೇದನ ಪಡೆದು ದೂರ ದೂರವಾದ್ರು.
ಸಾನಿಯಾ ಮಿರ್ಜಾರಿಂದ ಡಿವೋರ್ಸ್ ಪಡೆದುಕೊಳ್ತಿದ್ದಂತೆ ಶೋಯಬ್ ಮತ್ತೊಂದು ಮದುವೆಯಾದರು. ಆದರೆ ಇತ್ತ ಸಾನಿಯಾ ಮಗನ ಜೊತೆ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರು. ಆದರೆ ಇದೀಗ ಸಾನಿಯಾ ಖ್ಯಾತ ನಟನೊಂದಿಗೆ ಎರಡನೇ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಶೋಯೆಬ್ ಮಲಿಕ್ ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದಾರೆ ಎಂದು ಸಾನಿಯಾಗೆ ತಿಳಿಯುತ್ತಿದ್ದಂತೆ ಪತಿಗೆ ವಿಚ್ಛೇದನ ನೀಡಿ ಭಾರತಕ್ಕೆ ವಾಪಸ್ ಆದರು.
ಬ್ರೇಕಪ್ ನಂತರ ಶೋಯೆಬ್ ಮಲಿಕ್ ಮತ್ತೆ ಮದುವೆಯಾದ್ರು. ಆದರೆ ಸಾನಿಯಾ ಬಗ್ಗೆ ಕೆಲವು ವರ್ಷಗಳಿಂದ ಒಬ್ಬಂಟಿಯಾಗಿದ್ರು ಇದೀಗ ನಟನ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಶ್ರೀಘ್ರದಲ್ಲೇ ತೆಲುಗು ನಾಯಕನನ್ನ ಮದುವೆಯಾಗಲಿದ್ದಾರೆ ಎಂಬ ರೂಮರ್ಸ್ ಕೇಳಿ ಬಂದಿದೆ.
ಸಾನಿಯಾ ಜೊತೆಗಿನ ವಿಚ್ಛೇದನದ ನಂತರ ಶೋಯೆಬ್ ಮಲಿಕ್ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನ ವಿವಾಹವಾದರು. ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಸಾನಿಯಾ ಜೊತೆಯಲ್ಲಿದ್ದಾಗಲೇ ಶೋಯೆಬ್ ಸನಾ ಜೊತೆ ಕಾಲ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿತ್ತು.
ಶೋಯಬ್ ಜೊತೆ ಸನಾ ಜಾವೇದ್ ಅವರಿಗೂ ಇದು ಎರಡನೇ ಮದುವೆ ಆಗಿತ್ತು. ಅಕ್ಟೋಬರ್ 2020 ರಲ್ಲಿ ಪಾಕಿಸ್ತಾನಿ ನಟ ಮತ್ತು ಗಾಯಕ ಉಮೈರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದ ಸನಾ ಬಳಿಕ ವಿಚ್ಛೇದನ ಪಡೆದಿದ್ರು.
ಸಾನಿಯಾ ಮಿರ್ಜಾ ತೆಲುಗು ಸೂಪರ್ ಸ್ಟಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಟಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಆದರೆ ಆ ಸ್ಟಾರ್ ನಟ ಯಾರು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಆದರೆ ಈ ಸಂಬಂಧ ಮದುವೆಯವರೆಗೂ ಮುಂದುವರೆಯುವುದು ಪಕ್ಕಾ ಆಗಿದೆ.
ಈ ಹಿಂದೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಸಾನಿಯಾ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಆದರೆ ಇವೆಲ್ಲವೂ ಕೇವಲ ವದಂತಿಗಳಾಗಿದ್ದು ಇದೀಗ ಸ್ಟಾರ್ ನಟನೆ ಜೊತೆ ಮದುವೆಯಾಗೋದು ಆಲ್ ಮೋಸ್ಟ್ ಕನ್ಪಾರ್ಮ್ ಆಗಿದೆ.