ಹೈದರಾಬಾದ್: ‘ಪುಷ್ಪ 2’ ಗೆಲುವಿನ ನಾಗಾಲೋಟ ಮುಂದುವರಿದಿದೆ. ಡಿಸೆಂಬರ್ 5 ರಂದು ತೆರೆಕಂಡ ಚಿತ್ರವು ಭರ್ಜರಿ ಯಶಸ್ಸು ಕಂಡಿದೆ. ಈಗಾಗಲೇ 17 ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪುಷ್ಪ 2’ ಸಿನಿಮಾದ ನಿರ್ಮಾಪಕರಿಗೆ ತೆಲಂಗಾಣ ಹೈಕೋರ್ಟ್ ರಿಲೀಫ್ ನೀಡಿದೆ.
ಹೌದು ಪ್ರಕರಣದ ವಿರುದ್ಧ ಅಲ್ಲು ಅರ್ಜುನ್ ಹಾಗೂ ಇನ್ನೂ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ ತೆಲಂಗಾಣ ಹೈಕೋರ್ಟ್ ಇದೀಗ ‘ಪುಷ್ಪ 2’ ಸಿನಿಮಾದ ನಿರ್ಮಾಪಕರಿಗೆ ರಿಲೀಫ್ ದೊರೆತಿದ್ದು,
ಬ್ಯಾಟರಿ ತೆಗೆಯಲು ಸಾಧ್ಯವಿಲ್ಲದ ಮೊಬೈಲ್ ಹ್ಯಾಂಗ್- ಸ್ಲೋ ಆಗ್ತಿದ್ಯಾ..? ಹಾಗಿದ್ರೆ ಈ ಟಿಪ್ಸ್ ಪಾಲಿಸಿ
ಸಿನಿಮಾದ ನಿರ್ಮಾಪಕರನ್ನು ಬಂಧಿಸದಂತೆ ಸೂಚಿಸಿದೆ. ಪ್ರಕರಣದ ಕುರಿತಾಗಿ ದಾಖಲಾಗಿದ್ದ ಎಫ್ಐಆರ್ನಲ್ಲಿ ನಿರ್ಮಾಪಕರ ಹೆಸರನ್ನೂ ಸಹ ಸೇರಿಸಿದ್ದ ಕಾರಣ ನಿರ್ಮಾಪಕರು ತೆಲಂಗಾಣ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ ಮಂಡಿಸಿದ ನಿರ್ಮಾಪಕರ ಪರ ವಕೀಲರು,
‘ನಿರ್ಮಾಪಕರು ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಚಿತ್ರಮಂದಿರಗಳ ಬಳಿ ನಡೆವ ಯಾವುದೇ ಘಟನೆಗೆ ಅವರು ಕಾರಣಕರ್ತರಲ್ಲ’ ಎಂದು ವಾದಿಸಿದರು. ವಾದ ಮನ್ನಿಸಿದ ನ್ಯಾಯಮೂರ್ತಿಗಳು ನಿರ್ಮಾಪಕರನ್ನು ಬಂಧಿಸದಂತೆ ಸೂಚಿಸಿದ್ದಾರೆ.