ನವದೆಹಲಿ: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಐಪಿಎಲ್ನ ಮಾಜಿ ಆಟಗಾರ ಸಂದೀಪ್ ಲಮಿಚನ್ನೆ ವಿರುದ್ಧದ ಅತ್ಯಾಚಾರ ಆರೋಪವನ್ನು ಖುಲಾಸೆ ಮಾಡಲಾಗಿದೆ. ತಮ್ಮ ವಿರುದ್ಧದ ರೇಪ್ ಆರೋಪ ಹಾಗೂ ಅದಕ್ಕಾಗಿ ನೀಡಲಾಗಿರುವ 8 ವರ್ಷದ ಶಿಕ್ಷೆಯ ವಿರುದ್ಧ ಹೈಕೋರ್ಟ್ಗೆ ಸಂದೀಪ್ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಈತನ ವಿರುದ್ಧದ ಎಲ್ಲಾ ಆರೋಪಗಳನ್ನು ಖುಲಾಸೆ ಮಾಡಿದೆ. ನೇಪಾಳ ತಂಡದ ನಾಯಕನಿಗೆ ಕಳೆದ ಜನವರಿಯಲ್ಲಿ ಲೈಂಗಿಕ ದೌರ್ಜನ್ಯಕ್ಕಾಗಿ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಿದ್ದರು. ”ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದೆ.
![Demo](https://ainlivenews.com/wp-content/uploads/2023/12/spoorthi-1.jpg)
BMTC Recruitment: ದ್ವಿತೀಯ PUC ಪಾಸಾದವರಿಗೆ BMTCಯಲ್ಲಿ ಬಂಪರ್ ಉದ್ಯೋಗ..! ಈಗಲೇ ಅರ್ಜಿ ಸಲ್ಲಿಸಿ
ಸಂದೀಪ್ ಲಮಿಚ್ಚನ್ನೆ ಅವರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಪಟಾನ್ ಹೈಕೋರ್ಟ್ ವಕ್ತಾರ ಬಿಮಲ್ ಪರಾಜುಲಿ ಬುಧವಾರ ತಿಳಿಸಿದ್ದಾರೆ. 2022 ರಲ್ಲಿ ಕಠ್ಮಂಡು ಹೋಟೆಲ್ನಲ್ಲಿ 18 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಲಮಿಚ್ಚನ್ನೆ ಶಿಕ್ಷೆಗೆ ಗುರಿಯಾಗಿದ್ದರು. ಮೂಲಗಳ ಪ್ರಕಾರ ಸಂದೀಪ್ ಲಮಿಚ್ಚನ್ನೆ ಮುಂಬರುವ ಟಿ20 ವಿಶ್ವಕಪ್ ಆಡಲಿರುವ ನೇಪಾಳ ತಂಡದ ಪರವಾಗಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)