ಕೊಪ್ಪಳ: ಗಂಧದ ಮರ ಕಡಿದು ತುಂಡನ್ನು ಸಾಗಿಸಿದ್ದ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಭೇದಿಸಿ ಯಲಬುರ್ಗಾ ಹಾಗೂ ಕುಕನೂರ್ ಪೊಲೀಸರು ಆರು ಕಳ್ಳರನ್ನು ಬಂಧಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ ರಾಮ್ ಎಲ್ ಅರಸಿದ್ದಿ ಈ ಪ್ರಕರಣದಲ್ಲಿ 6 ಕಳ್ಳರನ್ನು ಬಂಧಿಸಿ ಜೊತೆಗೆ ಅವರಿಂದ ೪. 70 ಲಕ್ಷ ನಗದು ಹಣ ಹಾಗೂ 3.10 ಲಕ್ಷ ಮೌಲ್ಯದ ಟ್ರಾಲಿ ಶ್ರೀಗಂಧದ ವಸ್ತು ಎತ್ತುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 5.50 ಲಕ್ಷ ಮೌಲ್ಯದ ಎರಡು ವಾಹನಗಳನ್ನು ಒಟ್ಟು 13. 30 ಲಕ್ಷ ಮೌಲ್ಯದ ನಗದು ಹಣ ಆಗುವ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಹೇಳಿದರು.
ಗಮನಿಸಿ.. ಮಣ್ಣು ಪರೀಕ್ಷಾ ಕೇಂದ್ರ ತೆರೆಯಲು ಸರ್ಕಾರದಿಂದ ಸಿಗಲಿದೆ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ
ಕೊಪ್ಪಳ ಜಿಲ್ಲೆ ಯಲಬುರ್ಗಾ ವೃತ್ತ ವ್ಯಾಪ್ತಿಯ ಕುಕನೂರು ಪಟ್ಟಣ, ಶಿರೂರು ಸೀಮಾ ಹಾಗೂ ಕೊನೆಸಾಗರ ಸಿಮಾದಲ್ಲಿ ಜರುಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಎಎಸ್ಪಿ ಹೇಮಂತಕುಮಾರ್, DSP ಮುತ್ತಣ್ಣ ಸರವಗೊಳ ಇವರ ಮಾರ್ಗದರ್ಶನದಲ್ಲಿ ಸಿಪಿಐ ಮೌನೇಶ್ವರ ಪಾಟೀಲರ ನೇತೃತ್ವದಲ್ಲಿ ತನಿಖಾ ಅಧಿಕಾರಿ ಗುರುರಾಜ್ ಟಿ
ಇವರ ತಂಡ ಈ ಕಳ್ಳತನಗಳ ಪ್ರಕರಣವನ್ನು ಭೇದಿಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಹೆಮಂತಕುಮಾರ್ , ಸಿಪಿಐ ಮೌನೇಶ್ವರ್ ಮಾಲಿಪಾಟೀಲ್, ಪಿಎಸ್ಐಗಳಾದ ಗುರುರಾಜ್ ಟಿ, ವಿಜಯ ಪ್ರತಾಪ್, ಗುಲಾಮ್ ಅಹ್ಮದ, ಪ್ರಶಾಂತ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು