ಮಹಾ ಕುಂಭಮೇಳದಲ್ಲಿ ಘೋರ ದುರಂತ ಸಂಭವಿಸಿಬಿಟ್ಟಿದೆ. ಪುಣ್ಯಕ್ಷೇತ್ರದಲ್ಲಿ ಅಮೃತ ಸ್ನಾನ ಮಾಡಲು ಹೋದವರು ಶಿವನ ಪಾದ ಸೇರಿದ್ದಾರೆ. ದೇವರ ಸ್ಮರಣೆಗಳು ಕೇಳಬೇಕಿದ್ದ ಕ್ಷೇತ್ರದಲ್ಲಿ ಸಾವಿನ ಆರ್ತನಾದ ಕೇಳಿಸಿದೆ. ಪ್ರಯಾಗರಾಜ್ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನ ಸಾವನ್ನಪ್ಪಿರುವುದನ್ನು ಯೋಗಿ ಸರ್ಕಾರ ಕನ್ಫರ್ಮ್ ಮಾಡಿದೆ.
ಇದರ ನಡುವೆ ಮಹಾ ಕುಂಭಮೇಳದಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ, ನಟಿ, ನಿರೂಪಕಿ ಅನುಶ್ರೀ ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
Swollen Feet: ಪದೇ ಪದೇ ಪಾದಗಳು ಊದಿಕೊಳ್ಳುತ್ತವೆಯೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು
ಯಾವಾಗಲೂ ಸಿಂಪಲ್ ಆಗಿರುವ ರಾಜ್ ಬಿ ಶೆಟ್ಟಿ ಬಿಳಿ ಶರ್ಟ್, ಕುತ್ತಿಗೆಯಲ್ಲಿ ರುದ್ರಾಕ್ಷಿ ಹಾರ ಧರಿಸಿ, ಹಣೆ ಮೇಲೆ ಗಂಧವನ್ನು ಹಚ್ಚಿ ಅದರ ಮೇಲೆ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವಿಶೇಷತೆ ಅಂದ್ರೆ,
ರಾಜ್ ಬಿ ಶೆಟ್ಟಿ ಮಹಾಕುಂಭಕ್ಕೆ ಒಬ್ಬರೇ ತೆರಳಿಲ್ಲ, ಇವರಿಗೆ ಕರ್ನಾಟಕದ ಜನಪ್ರಿಯ ನಟಿ ನಿರ್ದೇಶಕಿ ಅನುಶ್ರೀಯವರು ಹಾಗೂ ಚಾರ್ಲಿ 777 ನಿರ್ದೇಶಕರಾಗಿರುವ ಕಿರಣ್ ರಾಜ್ ಕೂಡ ಸಾಥ್ ನೀಡಿದ್ದಾರೆ. ಜೊತೆಗೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ಕಾಂತಾರಾ ಸಿನಿಮಾ ಖ್ಯಾತಿಯ ರಂಜನ್ ಎಸ್ ಹಾಗೂ ಮತ್ತಿತರರು ಕೂಡ ಭಾಗಿಯಾಗಿದ್ದಾರೆ. ಖ್ಯಾತ ನಿರೂಪಕಿ ಅನುಶ್ರೀ, ಚಾರ್ಲಿ ನಿರ್ದೇಶಕ ಕಿರಣ್ ರಾಜ್, ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆಳೆಯರ ಜೊತೆ ಪುಣ್ಯಸ್ನಾನ ಮಾಡಿದ್ದಾರೆ.