ಸ್ಯಾಮ್ಸಂಗ್ ವಿಶ್ವದಲ್ಲಿ ಅದ್ಭುತವಾದ ಫೋಲ್ಡಬಲ್ ಸ್ಮಾರ್ಟ್ಫೋನ್ಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಇದರ ಬೆಲೆ ಕೂಡ ದುಬಾರಿ ಆಗಿದೆ. ಇದೀಗ ಸ್ಯಾಮ್ಸಂಗ್ 2024ರಲ್ಲಿ ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಸ್ಯಾಮ್ಸಂಗ್ ಕಂಪನಿ ತನ್ನ ವಿಶೇಷ ರೀತಿಯ ಫೀಚರ್ಸ್ ಅನ್ನು ಒಳಗೊಂಡ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಹೌದು ಗ್ಯಾಲಕ್ಸಿ ಝಡ್ ಫೋಲ್ಡ್ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಕನೆಕ್ಟೆಡ್ ಇಕೋಸಿಸ್ಟಮ್ ಉತ್ಪನ್ನಗಳನ್ನ ರಿಲೀಸ್ ಮಾಡಿದೆ. ಗ್ರಾಹಕರು 24 ತಿಂಗಳ ಅವಧಿಯ ನೋ ಕಾಸ್ಟ್ ಇಎಂಐ ಯೋಜನೆಯಡಿ ಗ್ಯಾಲಕ್ಸಿ ಝಡ್ ಫ್ಲಿಪ್ 6 ಅನ್ನು ಕೇವಲ 4,250 ರೂ.ಗೆ ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್ 6 ಅನ್ನು ಕೇವಲ 6,542 ರೂ.ಗಳಿಗೆ ಕೊಳ್ಳಬಹುದು ಎಂದು ಕಂಪನಿ ಹೇಳಿದೆ.
ಹಿಂದಿನ ತಲೆಮಾರಿನ ಫೋಲ್ಡಬಲ್ ಸ್ಮಾರ್ಟ್ಫೋನ್ಗಳಿಗೆ ಹೋಲಿಸಿದರೆ ಮೊದಲ 24 ಗಂಟೆಗಳಲ್ಲಿ, ಭಾರತದಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಝಡ್ ಫ್ಲಿಪ್ 6 ಗಳು ಶೇ 40ರಷ್ಟು ಹೆಚ್ಚು ಪ್ರಿ-ಬುಕಿಂಗ್ ಪಡೆದುಕೊಂಡಿವೆ ಎಂದು ಕಂಪನಿ ತಿಳಿಸಿದೆ.
ಗ್ಯಾಲಕ್ಸಿ ಝಡ್ ಫೋಲ್ಡ್ 6 ದೊಡ್ಡ ಸ್ಕ್ರೀನ್ನೊಂದಿಗೆ ನೋಟ್ ಅಸಿಸ್ಟ್, ಕಂಪೋಸರ್, ಸ್ಕೆಚ್ ಟು ಇಮೇಜ್, ಇಂಟರ್ ಪ್ರೆಟರ್, ಫೋಟೋ ಅಸಿಸ್ಟ್ ಮತ್ತು ಇನ್ ಸ್ಟಂಟ್ ಸ್ಲೋ-ಮೋ – ಎಐ-ಚಾಲಿತ ವೈಶಿಷ್ಟ್ಯಗಳು ಮತ್ತು ಪರಿಕರಗಳ ಶ್ರೇಣಿಯನ್ನು ಹೊಂದಿದೆ.
ಹೊಸ ಫೋಲ್ಡಬಲ್ ಗಳು ಅತ್ಯಂತ ತೆಳುವಾದ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ ಮತ್ತು ನೇರ ಅಂಚುಗಳೊಂದಿಗೆ ಸಂಪೂರ್ಣವಾಗಿ ಸಿಮೆಟ್ರಿಕಲ್ ವಿನ್ಯಾಸ ಹೊಂದಿವೆ. ಗ್ಯಾಲಕ್ಸಿ ಝಡ್ ಸರಣಿಯು ವರ್ಧಿತ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಸಹ ಹೊಂದಿದೆ. ಇದು ಅತಿ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯಾಗಿದೆ.
ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಕಾರಣದಿಂದ ಬ್ಯಾಟರಿ ಬಾಳಿಕೆಯ ಬಗ್ಗೆ ಚಿಂತಿಸದೆ ನೀವು ದೀರ್ಘಾವಧಿಯ ಸಮಯದವರೆಗೆ ಈ ಗ್ಯಾಲಕ್ಸಿ ಝಡ್ ಫ್ಲಿಪ್6ನ ಎಲ್ಲಾ ಸೃಜನಾತ್ಮಕ ಮತ್ತು ಕಸ್ಟಮೈಸ್ ಮಾಡಬಹುದಾದ ಫೀಚರ್ಗಳನ್ನು ಬಳಸುವುದನ್ನು ಮುಂದುವರಿಸಬಹುದಾಗಿದೆ.
ಬೆಲೆ ಎಷ್ಟು: ಗ್ಯಾಲಕ್ಸಿ ಝಡ್ ಫೋಲ್ಡ್ 6 1,64,999 ರೂ.ಗಳ (12 ಜಿಬಿ + 256 ಜಿಬಿ) ಆರಂಭಿಕ ಬೆಲೆಯಲ್ಲಿ ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್ 6 1,09,999 ರೂ.ಗಳ (12 ಜಿಬಿ + 256 ಜಿಬಿ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹಾಗೆಯೇ ಗ್ಯಾಲಕ್ಸಿ ವಾಚ್ ಅಲ್ಟ್ರಾ 59,999 ರೂ. ಮತ್ತು 40 ಎಂಎಂ ಮಾಡೆಲ್ನ ಗ್ಯಾಲಕ್ಸಿ ವಾಚ್ 7 29,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿವೆ.