ಅಕ್ಕಿನೇನಿ ನಾಗ ಚೈತನ್ಯ ಹಾಗೂ ನಟಿ ಸಮಂತಾ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ವಿಚ್ಚೇದನ ಪಡೆದು ದೂರ ದೂರವಾದರು. ಇವರಿಬ್ಬರ ಡಿವೋರ್ಸ್ ಗೆ ಇದುವರೆಗೂ ನಿಖರ ಕಾರಣ ತಿಳಿದಿಲ್ಲ.
ಸಮಂತಾ ಅವರಿಂದ ವಿಚ್ಛೇದನ ಪಡೆದ ನಂತರ ಶೋಭಿತಾ ಜೊತೆ ಸುಮಾರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ನಾಗಚೈತನ್ಯ ಕಳೆದ ವರ್ಷ ಡಿಸೆಂಬರ್ ನಲ್ಲಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಂಡ್ರು. ಸ್ಯಾಮ್ ಇತ್ತೀಚೆಗೆ ನಾಗ ಚೈತನ್ಯ 2ನೇ ಮದುವೆಯ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಮಂತಾ ಅವರಿಗೆ ಮಾಜಿ ಪತಿ ನಾಗ ಚೈತನ್ಯ ಅವರ ಎರಡನೇ ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ರು. ನಿಮ್ಮ ಮಾಜಿ (ನಾಗ ಚೈತನ್ಯ) ಪತಿಯ ಹೊಸ ಜೀವನದ ಬಗ್ಗೆ ನಿಮಗೆ ಅಸೂಯೆ ಇದೆಯೇ?” ಎಂಬ ಪ್ರಶ್ನೆಗೆ ನಟಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.
“ಇಲ್ಲ, ಅಸೂಯೆಗೆ ನನ್ನ ಜೀವನದಲ್ಲಿ ಸ್ಥಾನವಿಲ್ಲ. ಅದು ನನ್ನ ಜೀವನದ ಭಾಗವಾಗುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ಕೆಟ್ಟ ವಿಷಯಗಳಿಗೆ ಅಸೂಯೆಯೇ ಕಾರಣ ಎಂದು ನಾನು ನಂಬುತ್ತೇನೆ ಎಂದು ನಟಿ ಸಮಂತಾ ಹೇಳಿದ್ದಾರೆ.
ಹಳೆಯ ಸಂಬಂಧದಿಂದ ಹೊರಬರಲು ತಾನು ಬಹಳಷ್ಟು ಕಷ್ಟಪಟ್ಟಿದ್ದೇನೆ. ಕೆಲವೊಂದನ್ನು ಸಂಪೂರ್ಣವಾಗಿ ಮರೆಯಲು ಪ್ರಯತ್ನಿಸಿದ್ದೇನೆ ಎಂದು ಸಮಂತಾ ಹೇಳಿದ್ದಾರೆ. ಸಮಂತಾ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಚಿಕಿತ್ಸೆ ಪಡೆಯಲೆಂದು ಸ್ಯಾಮ್ ಒಂದು ವರ್ಷ ಸಿನಿಮಾಗಳಿಂದ ದೂರ ಉಳಿದಿದ್ರು. ಸದ್ಯ ಅನಾರೋಗ್ಯದಿಂದ ಹೊರ ಬಂದಿರುವ ಸಮಂತಾ ಸಿನಿಮಾಗಳತ್ತ ಹೆಚ್ಚು ಕನ್ಸಾಟ್ರೇಟ್ ಮಾಡ್ತಿದ್ದಾರೆ.