ಸಮಂತಾ (Samantha) ಸದ್ಯಕ್ಕೆ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಊರೂರು ಸುತ್ತುತ್ತಾ ಇದ್ದಾರೆ. ಆರೋಗ್ಯದತ್ತ ಗಮನ ಕೊಡುತ್ತಿದ್ದಾರೆ. ಈ ಸಮಯದಲ್ಲಿಯೇ ಸಮಂತಾಗೆ ಮತ್ತೆ ಮದುವೆ ಆಗುವ ಒತ್ತಾಯ ಹೆಚ್ಚಾಗಿದೆ. ಆದರೆ ಸ್ಯಾಮ್ ಲಗ್ನ ಬೇಡ, ಮಕ್ಕಳು ಬೇಕು ಎನ್ನುತ್ತಿದ್ದಾರಂತೆ. ಅದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.
ಇನ್ನು ಕೆಲವು ತಿಂಗಳು ಸಮಂತಾ ವೆಕೇಷನ್ ಮಾಡುತ್ತಾ ಆರೋಗ್ಯಕ್ಕೆ ಸಂಬಂಧಿಸಿದ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ಅದಾದ ಮೇಲೆ ಸಿನಿಮಾ, ಕ್ಯಾಮೆರಾ ಇತ್ಯಾದಿ. ಈಗ ಮನೆಯಲ್ಲಿ ಮತ್ತೊಂದು ಮದುವೆ ಆಗುವಂತೆ ಒತ್ತಡ ಹೇರುತ್ತಿದ್ದಾರಂತೆ. ಮೂವತ್ತಾರು ವಯಸ್ಸು. ಈಗಲೇ ಇನ್ನೊಂದು ಜೋಡಿ ನೋಡಿಕೋ ಎನ್ನುವುದು ತಪ್ಪಲ್ಲ. ಆದರೆ ಸ್ಯಾಮ್ ಮಾತ್ರ ಮದುವೆಯ (Wedding) ಮರ್ಮಾಘಾತಕ್ಕೆ ಸಿಕ್ಕಿ ಬಂದಿದ್ದಾರೆ. ಇಬ್ಬರು ಮಕ್ಕಳನ್ನು ದತ್ತು ಪಡೆಯುತ್ತೇನೆ. ನೋ ಮ್ಯಾರೇಜ್ ಎಂದಿದ್ದಾರಂತೆ.
ಒಂದು ಸಲ ಹೊಡೆತ ಬಿದ್ದರೆ ಮನಸು ಹೀಗೊಂದು ತೀರ್ಮಾನಕ್ಕೆ ಬರುತ್ತದೆ. ಬಹುಶಃ ಸಮಂತಾಗೂ ಅದೇ ಆಗಿರಬೇಕು. ಇನ್ನೊಂದು ಹುಡುಗ ಇನ್ನೊಂದು ಕನಸು ಹೊಸ ಕಿತ್ತಾಟ? ಬೇಕಾ? ಬೇಡವಾ ಎನ್ನುತ್ತಾ ಸ್ವಂತ ಟ್ರಸ್ಟ್ನಿಂದ ಸಮಾಜ ಸೇವೆ ಮಾಡೋದು. ಮಕ್ಕಳನ್ನು ದತ್ತು ಪಡೆದು ಸಾಕೋದು. ಇದೇ ಗುರಿ ಮಾಡಿಕೊಳ್ಳುವ ಇರಾದೆ ಇದೆ. ಆದರೆ ಸಮಂತಾ ನಿಲುವನ್ನು ಅಮ್ಮ ಅಪ್ಪ ಒಪ್ಪುತ್ತಾರಾ? ಫ್ಯಾನ್ಸ್ ಸುಮ್ಮನಿರುತ್ತಾರಾ? ಸ್ಯಾಮ್ ಭವಿಷ್ಯ ಒಂಟಿಯಾ ಜಂಟಿಯಾ? ಕಾಯಬೇಕಿದೆ.