ಬೆಂಗಳೂರು:- ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹೆಚ್ಚಾಗಿದ್ದು, ಸಾಲ ವಾಪಸು ಮಾಡಲು ವಿಳಂಬವಾದರೆ ಅವುಗಳು ನೀಡುವ ಕಿರುಕುಳದಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುವುದು, ಮನೆ ಬಿಟ್ಟು ಪರಾರಿಯಾಗುವಂಥ ಘಟನೆಗಳು ನಡೆಯುತ್ತಿವೆ. ಕುಟುಂಬಗಳನ್ನು ಬೀದಿಗೆ ತಳ್ಳುವಂಥ ಘಟನೆಗಳು ವ್ಯಾಪಕವಾಗಿವೆ.
ಒಂದು ತಿಂಗಳು ಕಂತು ಕಟ್ಟುವುದು ತಪ್ಪಿದರೂ ಮನೆ ಬಳಿ ಬಂದು ಟಾರ್ಚರ್ ಕೊಡುತ್ತಿದ್ದಾರೆ. ಹೀಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಟಾರ್ಚರ್ ತಾಳಲಾರದೇ ರಾಜ್ಯದಲ್ಲಿ ಈವರೆಗೂ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ, ರಾಯಚೂರು, ಬೆಳಗಾವಿಯಲ್ಲಿ ಒಬ್ಬೊಬ್ಬರು ಸಾವಿಗೆ ಶರಣಾಗಿದ್ದಾರೆ. ಕೆಲವೆಡೆ ಸಾಲ ಕೊಟ್ಟವರ ಕಾಟ ತಡೆಯಲಾಗದೇ ಮನೆಗೆ ಬೀಗ ಹಾಕಿಕೊಂಡು ಊರು ತೊರೆದಿದ್ದಾರೆ.
ದೌರ್ಜನ್ಯದ ಬಗ್ಗೆ ನೋಡೋದಾದ್ರೆ:
ಹಾವೇರಿ ಜಿಲ್ಲೆಯ ಹಾನಗಲ್ನ ಕೊಪ್ಪರಸಿಕೊಪ್ಪದಲ್ಲಿ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳ ತಡೆಯಲಾಗದೇ ಸಾವಿತ್ರಮ್ಮ ಎಂಬ ಮಹಿಳೆ ಊರನ್ನೇ ತೊರೆದಿದ್ದಾಳೆ. ಇವರು ತಮ್ಮ ನೆಂಟರಿಗಾಗಿ ಮೈಕ್ರೋ ಫೈನಾನ್ಸ್ನಿಂದ ಸಾಲ ಮಾಡಿಕೊಟ್ಟಿದ್ದರು. ಆದರೆ ಅವರು, ಸರಿಯಾಗಿ ಕಟ್ಟದ ಹಿನ್ನೆಲೆಯಲ್ಲಿ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಮನಗೆ ಬಂದು ಕಿರುಕುಳ ನೀಡಲು ಶುರುಮಾಡಿದ್ದಾರೆ. ಇದರಿಂದ ನೊಂದು ಊರನ್ನೇ ಬಿಟ್ಟಿದ್ದಾರೆ.
ಸಲೂನ್ ಮಾರಿ ಊರು ತೊರೆದ ಕ್ಷೌರಿಕ: ತಂದೆ ಮಗ ಎನ್.ಟಿ. ರಸ್ತೆಯಲ್ಲಿ 2 ವರ್ಷದ ಹಿಂದೆ ಮಾಸ್ಟರ್ ಕಟ್ ಸಲೂನ್ ಹೆಸರಿನ ಅಂಗಡಿ ತೆರೆದಿದ್ದರು. ಅಂಗಡಿಗೆ ಸ್ವಲ್ಪ ಸಾಲ ಮಾಡಿಕೊಂಡಿದ್ದ ಮಗ ಶ್ರೀನಿವಾಸ್ ಸಾಲ ತೀರಿಸಲು ಬಳಿ ಸಾಲ ಮಾಡಿದ್ದ ಬಳಿಕ ದಿನ ದುಡಿದರೂ ಬಡ್ಡಿ ಕಟ್ಟಲಾಗದೆ ಬಡ್ಡಿ ಮಾಫಿಯಾದ ಕಿರುಕುಳಕ್ಕೆ ಒಳಗಾಗಿದ್ದ. ಇತ್ತೀಚೆಗೆ ಫೈನಾನ್ಸ್ ಸಿಬ್ಬಂದಿ ಸಾಲ ಕಟ್ಟುವಂತೆ ಒತ್ತಡ ಹಾಕುತ್ತಿದ್ದರು. ಫೈನಾನ್ಸ್ ಅವರ ಕಿರುಕುಳಕ್ಕೆ ಬೆದರಿ 6 ತಿಂಗಳ ಹಿಂದೆ ತನ್ನ ಅಂಗಡಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಪತ್ನಿ, ಮಕ್ಕಳು, ವಯೋವೃದ್ಧ ತಂದೆ- ತಾಯಿಯನ್ನು ತೊರೆದು ಊರು ಬಿಟ್ಟಿದ್ದಾನೆ. ಮಗ ಮಾರಿದ ಸಲೂನ್ನಲ್ಲಿ ಅಪ್ಪ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಬಾಣಂತಿ, ಹಸುಗೂಸು ಹೊರಹಾಕಿ ದೌರ್ಜನ್ಯ.. ಸಾಲ ವಸೂಲಾತಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ 1 ತಿಂಗಳ ಹಸುಗೂಸನ್ನು ಲೆಕ್ಕಿಸದೇ ಮನೆಯಿಂದ ಎಲ್ಲರನ್ನೂ ಹೊರಗೆ ಹಾಕಿ ಮನೆ ಜಪ್ತಿ ಮಾಡಿದ ಅಮಾನವೀಯ ಘಟನೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳದಲ್ಲಿ ನಡೆದಿದೆ. ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಫೈನಾನ್ಸ್ ಸಿಬ್ಬಂದಿ, ಮನೆಯಲ್ಲಿದ್ದ ಎಲ್ಲ ಸದಸ್ಯರನ್ನು ಹೊರಹಾಕಿದರು. ತಾರಿಹಾಳದ ಗಣಪತಿ ರಾಮಚಂದ್ರ ಲೋಹಾರ ಎಂಬುವರ ಮನೆಯನ್ನು ಜಪ್ತಿ ಮಾಡಲಾಗಿದೆ. 5 ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ ಫೈನಾನ್ಸ್ನಿಂದ 25 ಲಕ್ಷ ಸಾಲ ಪಡೆದಿದರು. 3 ವರ್ಷ ಸರಿಯಾಗಿ ಕಂತನ್ನು ಕಟ್ಟಿದರು. ತಾಯಿಗೆ ಅನಾರೋಗ್ಯ ಮತ್ತು ಮಗಳ ಹೆರಿಗೆಯಾದ ಹಿನ್ನೆಲೆಯಲ್ಲಿ 6 ತಿಂಗಳಿಂದ ಸಾಲದ ಕಂತು ಮರುಪಾವತಿಸಲು ಸಾಧ್ಯವಾಗಿರಲಿಲ್ಲ.
ಯಾದಗಿರಿಯಲ್ಲಿ ಸಾಲ ಪಡೆದಿದ್ದ ಯುವಕನ ಮೇಲೆ ಮೀಟರ್ಬಡ್ಡಿ ದಂಧೆಕೋರನಿಂದ ದಾಳಿ ಮಾಡಿದ್ದಾರೆ. ದಾಳಿಯ ತೀವ್ರತೆಗೆ ಖಾಸಿಂ ಎಂಬ ಯುವಕ ಜೀವ ಕಳೆದುಕೊಂಡಿದ್ದಾನೆ. ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.
ತಾಳಿ ಹಿಡಿದು ಪ್ರತಿಭಟನೆ: ಬೆಳಗಾವಿಯಲ್ಲಿ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ತಾಳಿ ಹಿಡಿದು ಮಹಿಳೆಯರಿಂದ ಪ್ರತಿಭಟನೆ. ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅರಿಶಿಣದ ಕೊಂಬು: ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತು ಸಿಎಂ ಸಿದ್ದರಾಮಯ್ಯಗೆ ಮಾಂಗಲ್ಯ ಪೋಸ್ಟ್ ಮಾಡಿದ್ದ ರಾಣೆಬೆನ್ನೂರಿನ ಶೈಲಾ ಎಂಬುವರು ಕೊರಳಲ್ಲಿ ತಾಳಿ ಬದಲು ಅರಿಶಿಣ ಕೊಂಬು ಕಟ್ಟಿಕೊಂಡಿದ್ದಾರೆ.
ಅದಿರಲಿ, ಒಂದೇ ತಿಂಗಳು ಕಂತು ಕಟ್ಟುವುದು ತಪ್ಪಿದರಊ, ಜನರ ಮೇಲೆ ದರ್ಪ ತೋರುತ್ತಿರುವುದು ನಿಜಕ್ಕೂ ದುರಂತ.