ಕಾಯಿಸಿ ಕಾಯಿಸಿ ಕೊಡುವ ಊಟಕ್ಕೆ ರುಚಿ ಹೆಚ್ಚು ಅನ್ನುವಂತೆ ಸಲಾರ್ ಔತಣವನ್ನ ಕೊನೆಗೂ ಪ್ರೇಕ್ಷಕರಿಗೆ ಬಡಿಸಲು ಟೀಮ್ ಸಜ್ಜಾಗಿದೆ. ಆ ದಿನಕ್ಕೆ ಕೌಂಟ್ಡೌನ್ ಶುರುವಾಗಿದೆ. ವಿಶೇಷ ಅಂದ್ರೆ ಆಲ್ರೆಡಿ ಅಮೆರಿಕಾದಲ್ಲಿ ಲಕ್ಷಡಾಲರ್ ಕಲೆಕ್ಷನ್ ಮಾಡಿಬಿಟ್ಟಿದೆ ಸಲಾರ್. ಏನ್ ಆಶ್ಚರ್ಯವಿದು? ಬಿಡುಗಡೆಗೂ ಮುನ್ನ ಕಲೆಕ್ಷನ್ ಆಗಿದ್ಹೇಗೆ? ಆ ಬಗ್ಗೆ ಇಲ್ಲಿದೆ ಮಾಹಿತಿ.
ಸಲಾರ್ ಪ್ರಭಾಸ್ (Prabhas) ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ (KGF) ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ.
ಸಲಾರ್ (Salaar) ಮೇಲಿನ ನಿರೀಕ್ಷೆ ಎಷ್ಟಿದೆ ಅಂದ್ರೆ ಈಗಾಗಲೇ ಅಮೆರಿಕಾದಲ್ಲಿ ಈಗಾಗಲೇ ಲಕ್ಷ ಡಾಲರ್ ಕಲೆಕ್ಷನ್ ಟಿಕೆಟ್ನಿಂದ ಬಂದಿದೆ. ಅದ್ಹೇಗೆ ಅನ್ನೋದು ನಿಮ್ಮ ಅನುಮಾನವೇ? ಅನೇಕ ದೇಶಗಳಲ್ಲಿ ಸಲಾರ್ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅಮೆರಿಕಾ ಸಮೇತ. ಅದರಲ್ಲೂ ನಾರ್ಥ್ ಅಮೆರಿಕಾದಲ್ಲಿ ಹೆಚ್ಚಿನ ಭಾರತೀಯರಿದ್ದಾರೆ. ಆ ಭಾಗದಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವನ್ನ ನೋಡುವ ಕುತೂಹಲ. ಇದೇ ಕಾರಣಕ್ಕೆ ಸಲಾರ್ ತಿಂಗಳಿಗೂ ಅಡ್ವಾನ್ಸ್ ಬುಕಿಂಗ್ ಸ್ಟಾರ್ಟ್ ಆಗಿದ್ದು ಮೊದಲ ದಿನವೇ ಲಕ್ಷ ಡಾಲರ್ ಮೊತ್ತದ ಟಿಕೆಟ್ ಸೇಲ್ ಆಗಿದೆ.
ಪ್ರಶಾಂತ್ ನೀಲ್ (Prashanth Neel) ಸ್ಟೈಲ್ ಆಫ್ ಮೇಕಿಂಗ್ ಅಂದ್ಮೇಲೆ ರಹಸ್ಯಗಳ ಜಾಸ್ತಿ. ಸಲಾರ್ ಪ್ರಭಾಸ್ ಲುಕ್ನ ಕೆಲವೇ ಕೆಲವು ಪೋಸ್ರ್ಗಗಳು ಬಿಟ್ಟರೆ ಟೀಸರ್ನಲ್ಲೂ ಪ್ರಭಾಸ್ರ ಲುಕ್ ರಹಸ್ಯವಾಗೇ ಇಟ್ಟಿದ್ದಾರೆ. ಸಾಮಾನ್ಯವಾಗಿ ಟ್ರೈಲರ್ ರಿಲೀಸ್ ಆದ್ಮೇಲೆ ಕ್ರೇಜ಼್ ಹುಟ್ಟಿಕೊಳ್ಳುತ್ತೆ. ಆದರೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇದ್ಯಾವ್ದೂ ಲೆಕ್ಕಕ್ಕೆ ಬರೋದೇ ಇಲ್ಲ. ಶುರುವಿನಿಂದ ಹಿಡಿದು ರಿಲೀಸ್ವರೆಗೂ ಕುತೂಹಲ ಕುತೂಹಲ ಕುತೂಹಲ.