ಹೊಂಬಾಳೆ ಫಿಲ್ಮ್ಸ್ನ (Hombale Films) ಮಹತ್ವಾಕಾಂಕ್ಷೆಯ ಚಿತ್ರವಾದ `ಸಲಾರ್ ಪಾರ್ಟ್ 1: ಸೀಸ್ಫೈರ್’ (Salaar: Part 1 – Ceasefire), ಡಿ.22ರಂದು ಜಗತ್ತಿನಾದ್ಯಂತ ಬಿಡುಗಡೆ. ಈ ಮಧ್ಯೆ ಚಿತ್ರವನ್ನು ದಕ್ಷಿಣ ಭಾರತದ ಪಿವಿಆರ್ – ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡದಿರುವುದಕ್ಕೆ ಹೊಂಬಾಳೆ ಫಿಲ್ಮ್ಸ್ ತೀರ್ಮಾನಿಸಿದೆ.
ಇಂಥದ್ದೊಂದು ನಿರ್ಧಾರಕ್ಕೆ ಕಾರಣವಾಗಿರುವುದು ಶಾರುಖ್ ಖಾನ್ ಅಭಿನಯದ `ಡಂಕಿ’ (Dunki) ಚಿತ್ರ ಡಿ.21ರಂದು ಬಿಡುಗಡೆಯಾಗುತ್ತಿರುವುದು. ಸಲಾರ್ ಪಾರ್ಟ್ 1: ಸೀಸ್ಫೈರ್ ಜೊತೆಗೆ ಕ್ಲಾಶ್ ಆಗಲಿದೆ. ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಡಂಕಿ ಚಿತ್ರ ವಿತರಕರು ಮಾತ್ರ ತಮಗೆ ನಾಲ್ಕೂ ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು.
ಯಾವಾಗ ಏಕಪರದೆಯ ಚಿತ್ರಮಂದಿರಗಳ ಸಂಘಗಳು ಎರಡೂ ಚಿತ್ರಗಳನ್ನು ಪ್ರದರ್ಶಿಸುವ ತೀರ್ಮಾನ ತೆಗೆದುಕೊಂಡಿತೋ, ಆಗ `ಡಂಕಿ’ ಚಿತ್ರದ ವಿತರಕರು ಮಲ್ಟಿಪ್ಲೆಕ್ಸ್ನತ್ತ ವಾಲಿದರು. ಅಲ್ಲಿ ಹೆಚ್ಚು ಪ್ರದರ್ಶನಗಳನ್ನು ಗಿಟ್ಟಿಸಿದರು. ಪಿವಿಆರ್ – ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್ಗಳಲ್ಲಿ `ಸಲಾರ್’ಗಿಂತ `ಡಂಕಿ’ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ಕೊಡುವುದಕ್ಕೆ ಮಲ್ಟಿಪ್ಲೆಕ್ಸ್ಗಳು ಸಹ ಒಪ್ಪಿವೆ.