ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಐಶ್ವರ್ಯ ರಜನಿಕಾಂತ್ ನಿರ್ದೇಶನದ ಬಹು ನಿರೀಕ್ಷಿತ ಲಾಲ್ ಸಲಾಂ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ರಜನಿಕಾಂತ್ ಮೊಯಿದೀನ್ ಭಾಯ್ ಹೊಸರಿನ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಕುರಿತಾಗಿ ಮತ್ತೊಂದು ಅಪ್ ಡೇಟ್ ಸಿಕ್ಕಿದೆ.
ಲಾಲ್ ಸಲಾಂ ಸಿನಿಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಸಾಕಷ್ಟು ತೂಕವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಂದ ಹಾಗೆ ರಜನಿ ಪಾತ್ರ ಕನ್ನಡದ ನಟ ಸಾಯಿಕುಮಾರ್ ಧ್ವನಿಯಾಗಿದ್ದಾರೆ.
‘ಲಾಲ್ ಸಲಾಂ’ ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಈ ಚಿತ್ರದ ತೆಲುಗು ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ತೆಲುಗು ವರ್ಷನ್ನಲ್ಲಿ ರಜನಿಕಾಂತ್ ಪಾತ್ರಕ್ಕೆ ಸಾಯಿಕುಮಾರ್ ಧ್ವನಿ ನೀಡಿದ್ದಾರೆ. ತಮಿಳಿನ ಜೊತೆಗೆ ತೆಲುಗು ವರ್ಷನ್ ಲಾಲ್ ಸಲಾಂ ಕೂಡ ಇಂದೇ ರಿಲೀಸ್ ಆಗುತ್ತಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಇರುವ ಕೆಲವು ರಜನಿಕಾಂತ್ ಫ್ಯಾನ್ಸ್ಗೆ ತಂಡದ ನಿರ್ಧಾರ ಬೇಸರ ಮೂಡಿಸಿದೆ. ತೆಲುಗು ಭಾಗದಲ್ಲಿ ತಂಡ ಯಾವುದೇ ಪ್ರಚಾರ ಮಾಡಿಲ್ಲ. ಇದು ಚಿತ್ರಕ್ಕೆ ಹಿನ್ನಡೆ ಆಗೋ ಸಾಧ್ಯತೆ ಇದೆ. ಇಷ್ಟು ವರ್ಷಗಳ ಕಾಲ ರಜನಿಕಾಂತ್ ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಅವರ ಪಾತ್ರಕ್ಕೆ ಗಾಯಕ ಮನೋ ಅವರು ಧ್ವನಿ ನೀಡುತ್ತಿದ್ದರು. ಅವರ ವಾಯ್ಸ್ಗೆ ಅಲ್ಲಿನ ಫ್ಯಾನ್ಸ್ ಅಡ್ಜಸ್ಟ್ ಆಗಿದ್ದರು. ಈಗ ಆ ಜಾಗಕ್ಕೆ ಸಾಯಿಕುಮಾರ್ ಅವರನ್ನು ತಂದಿದ್ದು ಕೆಲವರಿಗೆ ಬೇಸರವಾಗಿದ್ರೆ ಸಾಯಿಕುಮಾರ್ ಫ್ಯಾನ್ಸ್ ಗೆ ಸಖತ್ ಇಷ್ಟವಾಗಿದೆ.
‘ಲಾಲ್ ಸಲಾಂ’ ಸಿನಿಮಾದಲ್ಲಿ ರಜನಿಕಾಂತ್ ಅಥಿತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಕೇವಲ 40 ನಿಮಿಷಗಳ ಕಾಲ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಒಂದೊಂದು ನಿಮಿಷಯಕ್ಕೆ ಒಂದೊಂದು ಕೋಟಿಯಂತೆ ಒಟ್ಟು 40 ಕೋಟಿ ಸಂಭಾವನೆಯನ್ನು ರಜನಿಕಾಂತ್ ಈ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ.