ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಬೇಡಿಕೆಯ ತಾರೆಗಳಲ್ಲಿ ಸಾಯಿ ಪಲ್ಲವಿ ಒಬ್ಬರು. ಇತ್ತೀಚೆಗೆ, ಥಂಡೆಲ್ ನಟಿ ರಾಷ್ಟ್ರೀಯ ಪ್ರಶಸ್ತಿ ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಸನ್ಮಾನ ಸಮಾರಂಭಕ್ಕೆ ಧರಿಸಲು ತನ್ನ ಅಜ್ಜಿಯ ಸೀರೆಯನ್ನು ತುಂಬಾ ಜೋಪಾನವಾಗಿ ಇಟ್ಟಿದ್ದೇನೆ ಎಂದು ಅವರು ಹೇಳಿದರು.
ಹೌದು ದಕ್ಷಿಣ ಚಿತ್ರರಂಗದಲ್ಲಿ ಲೇಡಿ ಸೂಪರ್ಸ್ಟಾರ್ ನಯನತಾರ ಅಂತಂದ್ರೆ, ಲೇಡಿ ಪವರ್ ಸ್ಟಾರ್ ಅಂದ್ರೆ ಸಾಯಿ ಪಲ್ಲವಿ ಅಂತಾನೆ ಹೇಳ್ಬೇಕು. ಸಿನಿಮಾ ವಿಷ್ಯದಲ್ಲಿ ಅವರ ದೃಷ್ಟಿಕೋನ ಅಸಾಮಾನ್ಯ. ಸಾಯಿ ಪಲ್ಲವಿ ಅಂದ್ರೆ ಬರೀ ಗ್ಲಾಮರ್ ಪಾತ್ರಗಳಿಗೆ ಸೀಮಿತ ಅಲ್ಲ. ಪರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇತ್ತೀಚೆಗೆ ಸಾಯಿ ಪಲ್ಲವಿ ಅಭಿನಯದ ಸಿನಿಮಾಗಳು ಸೂಪರ್ ಹಿಟ್ ಆಗ್ತಿವೆ. ಒಳ್ಳೆಯ ಕಥೆ ಮತ್ತು ಪಾತ್ರಗಳ ಆಯ್ಕೆಯಲ್ಲಿ ಅವರು ನಿಖರ. ಹಿಟ್ ಸಿನಿಮಾ ಕೊಡೋಕೆ ಆಗಲ್ಲ ಅಂತಿದ್ದವರಿಗೆ ಉತ್ತರ ಕೊಡುವಂತೆ ಸಾಯಿ ಪಲ್ಲವಿ ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಶಿವಕಾರ್ತಿಕೇಯನ್ ಜೊತೆ ನಟಿಸಿದ ‘ಅಮರ್’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ೩೦೦ ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು.
ಇನ್ನು ಇತ್ತೀಚೆಗೆ ತೆರೆಕಂಡ ಸಾಯಿ ಪಲ್ಲವಿ ಅಭಿನಯದ ಪ್ರಯೋಗಾತ್ಮಕ ಚಿತ್ರ ‘ತಂಡೇಲ್’. ನಾಗಚೈತನ್ಯ ಜೊತೆ ನಟಿಸಿರುವ ಈ ಚಿತ್ರ 100 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ‘ಬುಜ್ಜಿತಳ್ಳಿ’ ಪಾತ್ರ ಅದ್ಭುತವಾಗಿದೆ. ಒಳ್ಳೆಯ ಕಥೆ ಇದ್ದರೆ ಸೂಪರ್ ಹಿಟ್ ಸಿನಿಮಾ ಮಾಡಬಹುದು ಎಂದು ಸಾಯಿ ಪಲ್ಲವಿ ಸಾಬೀತುಪಡಿಸಿದ್ದಾರೆ.
ಇನ್ನೂ ಒಂದು ವಿಶೇಷವಾದ ಸೀರೆಯ ಸಲುವಾಗಿ ತಾವು ನ್ಯಾಷನಲ್ ಅವಾರ್ಡ್ ಪಡೆಯಬೇಕು ಎಂದು ಸಾಯಿ ಪಲ್ಲವಿ ಅವರು ಹೇಳಿದ್ದಾರೆ. ಅಂದಹಾಗೆ, ಆ ಸೀರೆಯನ್ನು ಕೊಟ್ಟಿರುವುದು ಅವರ ಅಜ್ಜಿ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಬಗ್ಗೆ ಸಾಯಿ ಪಲ್ಲವಿ ಅವರು ಮಾತನಾಡಿದ್ದಾರೆ.
Turmeric Milk: ಈ ಸಮಸ್ಯೆಗಳಿದ್ದರೆ ತಪ್ಪಿಯೂ ಅರಿಶಿನ ಮಿಶ್ರಿತ ಹಾಲನ್ನು ಕುಡಿಯಬೇಡಿ!
ಅಭಿಮಾನಿಗಳ ನಿರೀಕ್ಷೆಯಂತೆ ‘ಗಾರ್ಗಿ’ ಸಿನಿಮಾದಲ್ಲಿನ ನಟನೆಗೆ ಸಾಯಿ ಪಲ್ಲವಿ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು. ಆದರೆ ಅದು ಮಿಸ್ ಆಯಿತು. ಮುಂದೊಂದು ದಿನ ಖಂಡಿತವಾಗಿಯೂ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಸಿಗಲಿದೆ ಎಂಬುದು ಫ್ಯಾನ್ಸ್ ನಂಬಿಕೆ. ಆ ದಿನ ಸಾಯಿ ಪಲ್ಲವಿ ಅವರು ಅಜ್ಜಿ ಕೊಟ್ಟ ಸೀರೆಯನ್ನು ಧರಿಸಲಿದ್ದಾರಂತೆ.
ಸಾಯಿ ಪಲ್ಲವಿ ಅವರಿಗೆ 21 ವರ್ಷ ವಯಸ್ಸಾಗಿದ್ದಾಗ ಅವರ ಅಜ್ಜಿ ಒಂದು ಸೀರೆಯನ್ನು ನೀಡಿದ್ದರು. ಮದುವೆಯ ದಿನ ಆ ಸೀರೆ ಧರಿಸಬೇಕು ಎಂದು ಅಜ್ಜಿ ಹೇಳಿದ್ದರು. ಆದರೆ ಒಂದು ವಿಶೇಷ ಸಂದರ್ಭದಲ್ಲಿ ಆ ಸೀರೆಯನ್ನು ಧರಿಸಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದೇ ಆ ವಿಶೇಷ ಸಂದರ್ಭ. ಹಾಗಾಗಿ ಆ ದಿನ ಬರಲಿ ಎಂದು ಅವರು ಕಾಯುತ್ತಿದ್ದಾರೆ. ಪ್ರಶಸ್ತಿ ಪಡೆಯುವವರೆಗೂ ಆ ಒತ್ತಡ ತಮ್ಮ ಮೇಲೆ ಇದ್ದೇ ಇರುತ್ತದೆ ಎಂದು ಅವರು ಹೇಳಿದ್ದಾರೆ.