ಸಾಗರ: ವಯಸ್ಸಿಗೆ ತಕ್ಕಂತೆ ಮಾತನಾಡಲ್ಲ ಮನುಷ್ಯ, ಅಪ್ಪನ ದುಡ್ಡು ಇತ್ತು ರಾಜ್ಯ ಅಧ್ಯಕ್ಷರಾಗಿ ಬಂದಿದ್ದಾರೆ, ವಿಜೇಂದ್ರ ನಿಗೆ ತಾಕತ್ತು ದಮ್ಮಿದ್ರೆ ನಮ್ಮ ಸರ್ಕಾರ ಉರಳುಸಕ್ಕೆ ಆಗುತ್ತಾ ಕೇಳಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸವಾಲ್ ಹಾಕಿದ್ದಾರೆ.
ಸಂಕ್ರಾಂತಿಯ ನಂತರ ಸರ್ಕಾರ ಪತನ ಗೋಲತೆ ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿ ಪಕ್ಷದ ಅರಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬೇಳೂರು, ಅಪ್ಪನ ಅಧಿಕಾರ ಹಾಗೂ ಅಪ್ಪನ ಹಣದ ಬಲದಿಂದ ರಾಜ್ಯ ಅಧ್ಯಕ್ಷರಾಗಿ ಬಂದಿದ್ದಾರೆ.
ಹಿಂದೆ ನಿನ್ನ ಹತ್ತಿರ ತಾಕತ್ತು ದುಡ್ಡು ಇತ್ತು ಎಂದು ಮಾಡಿರಬಹುದು ಈಗ ಅದೇ ಚಾಲೆಂಜ್ ನಾವ್ ಮಾಡುತ್ತೇವೆ ಬರಕ್ಕೆ ಹೇಳಿ. ಯಾವುದೇ ಸರ್ಕಾರ ಬೀಳಲ್ಲ ಆ ರೀತಿ ಯಾವುದೇ ಕೆಲಸ ಮಾಡಲು ಆಗಲ್ಲ.
ಅವರದೇ ಪಕ್ಷದವರು ಅವನದೇ ರಾಜೀನಾಮೆ ಕೇಳುತ್ತಿದ್ದಾರೆ ಅವನ ಬುಡಕ್ಕೆ ಬೆಂಕಿ ಬಿದ್ದಿದೆ ಅದನ್ನು ಉಳಿಸಿಕೊಳ್ಳಲು ಹೇಳಿ ನಮ್ಮ ಪಕ್ಷದ ಮಾತನಾಡಲು ವಿಜೇಂದ್ರ ನಮ್ಮ ಹೈಕಮಾಂಡ ನಮ್ಮ ಹೈಕಮಾಂಡ್ ಏನು ಮಾಡಬೇಕು ಮಾಡುತ್ತಾರೆ ಸದ್ಯಕ್ಕೆ ಯಾರ ರಾಜೀನಾಮೆ ಪಡೆಯುವ ಚರ್ಚೆ ಆಗಿಲ್ಲ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.