ಹುಬ್ಬಳ್ಳಿ: ಇತ್ತೀಚೆಗೆ ಕುಸುಬೆ ಬೆಳೆಯುವವರ ಸಂಖ್ಯೆ ಕಡಿಮೆಯಾಗ್ತಿದೆ. ಇದಕ್ಕೆ ಪ್ರಮುಖ ಕಾರಣ: ಒಕ್ಕಲು ಸಮಸ್ಯೆ. ಮುಳ್ಳು ತುಂಬಿದ ಈ ಬೆಳೆಯೊಂದಿಗೆ ಅದರೊಂದಿಗೆ ವ್ಯವಹರಿಸುವುದು ನಮ್ಮ ಹೈಬ್ರಿಡ್ ರೈತರಿಗೆ ಕಷ್ಟದ ಕೆಲಸ. ಆದರೆ ಇದನ್ನರಿತ ಕೃಷಿ ವಿಜ್ಞಾನಿಗಳು, ಇಂಥವರಿಗೆಂದೇ ಮುಳ್ಳೇ ಇರದ ಕುಸುಬೆ ಕಂಡುಹಿಡಿದರು. ಇದನ್ನು ಸಂಶೋಧನೆ ಮಾಡಿ ತುಂಬಾ ವರ್ಷವಾಯಿತಾದರೂ ಪ್ರಚಾರದ ಕೊರತೆ ಹಾಗೂ ಬೀಜಗಳು ಸಿಗದಿರುವಿಕೆಯಿಂದಾಗಿ ಮುಳ್ಳಿರದ ಕುಸುಬೆ ಬೆಳೆ,
ಇನ್ನೂ ಅಂದುಕೊಂಡಷ್ಟು ಯಶಸ್ಸು ಕಂಡಿಲ್ಲ. ಇಷ್ಟಕ್ಕೂ ಈಗ ಮೊದಲಿನಂತೆ ರಾಶಿ ಮಾಡಲು ಕಷ್ಟಪಡಬೇಕಿಲ್ಲ, ಕಟಾವು ಮಾಡುವುದರ ಜೊತೆಗೆ ರಾಶಿ ಮಾಡುವ ಯಂತ್ರಗಳೂ ಬಂದಿರುವುದರಿಂದ, ರೈತರು ಈ ಎಣ್ಣೆ ಬೆಳೆ ಬೆಳೆಯಲು ಮನಸ್ಸು ಮಾಡಬೇಕಷ್ಟೆ. ಉತ್ತರ ಕರ್ನಾಟಕ ಬಾಗದಲ್ಲಿ ಎಣ್ಣಿ ಕಾಳು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
Tesla Cars: ಟೆಸ್ಲಾ ಕಾರುಗಳಿಗೆ ಯಾವ ಮೇಡ್ ಇನ್ ಇಂಡಿಯಾ ಟೈರ್ʼಗಳನ್ನು ಬಳಸಲಾಗುತ್ತೆ ಗೊತ್ತಾ..?
ಕುಸುಬೆ ವಿಶೇಷವಾಗಿ ಉತ್ತರಕರ್ನಾಟಕದ ಆಳವಾದ ಕಪ್ಪುಮಣ್ಣಿಗೆ ಹೇಳಿ ಮಾಡಿಸಿದ ಬೆಳೆ. ಹಿಂಗಾರು ಮಳೆಯ ಸಂದರ್ಭದಲ್ಲಿ ಇದನ್ನು ಬೆಳೆಯುತ್ತಾರೆ. ನೀರಾವರಿ ಬಳಸಿಯೂ ಕುಸುಬೆ ಬೆಳೆಯಬಹುದಾದರೂ ರೋಗಗಳ ಕಾಟ ಜಾಸ್ತಿ. ಇನ್ನು ಮಸಾರಿ (ಕೆಂಪು) ಮಣ್ಣಿನಲ್ಲಿ ಇದು ಬೆಳೆಯಲು ಯೋಗ್ಯವಲ್ಲ.
ಖಾಸಗಿ ಕಂಪನಿಯ ಬೀಜಗಳು ಸಿಗುತ್ತವಾದರೂ ರೈತ ಸಂಪರ್ಕ ಕೇಂದ್ರ ಅಥವಾ ಹುಲಕೋಟಿಯ ಕುಸುಬೆ ಸಂಶೋಧನಾ ಕೇಂದ್ರದಿಂದ ಬೀಜಗಳನ್ನು ಪಡೆಯುವುದು ಒಳ್ಳೆಯದು. ಕುಸುಬೆ ಹಾಗೂ ಸೂರ್ಯಕಾಂತಿ ಬೆಳೆಯುವ ಪದ್ಧತಿ ಒಂದೇ ಥರ, ಎರಡಡಿ ಸಾಲು ಬಿಟ್ಟು ಅಡಿಗೆ ಒಂದರಂತೆ ಬರುವ ಹಾಗೆ ಬೀಜ ಹಾಕಬೇಕು. ಹೊಲ ಫಲವತ್ತಾಗಿದ್ದರೆ ಸರಿ, ಇಲ್ಲವೆಂದರೆ ಬಿತ್ತನೆಗೂ ಮೊದಲು ಎಕರೆಗೆ ಎರಡು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಬೇಕು ಎಂದು ಕೃಷಿ ಸಲಹೆಗಾರರು ಸಲಹೆ ನೀಡಿದ್ದು ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ