ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿರುವ ದತ್ತ ಮಹಾರಾಜರ ಅವತಾರ ಪುರುಷ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 8ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಗ್ಗೆ ನಡೆದ ಮಹಾರುದ್ರಾಭಿಷೇಕ ಪೂಜೆ, ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಮಹಾರುದ್ರಾಭಿಷೇಕ ಪೂಜೆ, ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು, ಸದ್ಗುರು ಶ್ರೀ ಸಚ್ಚಿದಾನಂದ ಸ್ವಾಮೀಜಿರವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ನಡೆದ ಪುರವಂತಿಕೆ ಸೇವೆ (ಪುರವಂತಿಕೆ ಮೇಳ) ಯನ್ನು ವೀಕ್ಷಿಸಿದರು. ನಂತರ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದರು.
Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
ಈ ಸಂದರ್ಭದಲ್ಲಿ ಇಟಗಾ ಮಠದ ಶರಣಯ್ಯ ಸ್ವಾಮಿ ಅರ್ಚಕರು, ಅರ್ಜುನಗಿರಿ ಬಾಬಾ, ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನದ ಅರ್ಚಕರಾದ ಶಿವಾನಂದ ಸ್ವಾಮಿ, ರಾಜಕುಮಾರ ಪಾಟೀಲ್, ಶೇಕಪ್ಪ ಪಾಟೀಲ್, ನರಸಣ್ಣ ಬಸಗೊಂಡ, ವಿಶ್ವನಾಥ ಬಾಲೇಬಾಯಿ, ಮಂಜುನಾಥ ಬಾಲೇಬಾಯಿ, ಅಮರೇಶ ಗುಮಾಸ್ತಿ, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಕೃಷ್ಣಚಾರಿ, ಶಿವರಾಜ್ ಹಾಲಹಳ್ಳಿ, ಲಕ್ಷ್ಮಣ ಹೊಸಳ್ಳಿ, ವಿಜಯಕುಮಾರ್ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.