ಹುಕ್ಕೇರಿ – ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ, ಶ್ರೀ ಗುರುಶಾಂತೇಶ್ವರ ಪ್ರೌಢ ಶಾಲೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಸಂಸ್ಕ್ರತ ಮತ್ತು ವೇದ ಪಾಠ ಶಾಲೆ ಶ್ರೀ ಗುರುಶಾಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ “ಹುಕ್ಕೇರೀಶರ ಉತ್ಸವ 2025” ನೇ ಸಾಲಿನ ಸಾಧನಾ ಸಿರಿ ಪ್ರಶಸ್ತಿ ಕೊಣ್ಣೂರು ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ|| ಪವಾಡೇಶ್ವರ ಮಹಾಸ್ವಾಮಿಗಳವರಿಗೆ ,
ರಾಯಬಾಗ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಅರುಣ ಐಹೊಳೆ ಅವರಿಗೆ,ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ನಿಲಜಗಿ ಅವರಿಗೆ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಪಾಟೀಲ ಅವರಿಗೆ ಅವಧೂತ ಶ್ರೀ ವಿನಯ ಗುರೂಜೀ ಅವರು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರಿರಂಗಪಟ್ಟಣ ಬೇಬಿಮಠದ ಶ್ರೀ ಡಾ|| ತ್ರೀನೇತ್ರ ಮಹಾಂತ ಸ್ವಾಮಿಗಳು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವಧೂತ ಶ್ರೀ ವಿನಯ ಗುರೂಜೀ ಅವರು ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯನ್ನು ಮೆಚ್ಚುವುದು ಬಹಳಷ್ಟು ವಿರಳ ಆದರೆ ಹುಕ್ಕೇರಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ ಸಂಸ್ಥೆ ಇನ್ನೊಂದು ಸಂಸ್ಥೆಯನ್ನು ಮೆಚ್ಚಿ ಸಾಧನಾ ಸಿರಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಆಧರಣಿಯ ಮತ್ತು ಅನುಕರಣಿಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ನಿಲಜಗಿ ಅವರು ನಮ್ಮ ಸಂಸ್ಥೆ ಇವತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ.ನಮ್ಮ ಸಂಸ್ಥೆಗೆ ಸಾಧನಾ ಸಿರಿ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು.
ಕೊಣ್ಣೂರು ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀ ಪವಾಡೇಶ್ವರ ಸ್ವಾಮಿಗಳು ಮಾತನಾಡಿ 1959 ರಲ್ಲಿ ಸ್ಥಾಪನೆಆದ ನಮ್ಮ ಸಂಸ್ಥೆ ಇವತ್ತು ಎಲ್ ಕೆ ಜಿ ಇಂದ ಡೀಗ್ರಿ ವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ಕೋಡುವುದರ ಜೊತೆಗೆ ಐಎಎಸ್ ಕೆಎಎಸ್ ಕೊಚಿಂಗ್ ಕೊಡುತ್ತಿದೆ ಎಂದರು. ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ ಐಹೊಳೆ ಅವರು ಮಾತನಾಡಿ ಶಿಕ್ಷಣಕ್ಕೆ ನಾವು ಹೆಚ್ಚು ಮಹತ್ವ ಕೊಡಬೇಕಾಗಿದೆ ದುಡ್ಡೆ ದೊಡ್ಡಪ್ಪ ಎನ್ನುವ ಕಾಲ ಹೋಯಿತು ವಿದ್ಯೆ ಅದರಪ್ಪ ಎಂದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಪಾಟೀಲ ಮಾತನಾಡಿ ಕ್ವಾಲಿಟಿ ಎಜುಕೇಷನ್ ಮೊದಲು ಆರಂಭಿಸಿದ ಸಂಸ್ಥೆ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅದನ್ನು ಮೆಚ್ಚಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾಧನಾ ಸಿರಿ ಪ್ರಶಸ್ತಿ ಅನುಗ್ರಹಿಸಿದ್ದು ಸಂತೋಷ ಎಂದರು.