ಬೀದರ್: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಖೆಯನ್ನ ಸಿಐಡಿ ತಂಡ ಚುರುಕುಗೊಳಿಸಿದೆ. ನಿನ್ನೆ ಬೆಳೆಗ್ಗೆಯಿಂದ ಬೀದರ್ ನಲ್ಲಿ ಬೀಡು ಬಿಟ್ಟಿರುವ ಸಿಐಡಿ ತನಿಖಾ ತಂಡ ಇಂಚಿಂಚು ಮಾಹಿತಿ ಕಲೆಹಾಕುತ್ತಿದೆ. ಈತ್ತ ಕುಟುಂಬದ ಸದಸ್ಯರು ಸಿಐಡಿ ತನಿಖೆ ನಮಗೆ ತೃಪ್ತಿ ಇಲ್ಲಾ ಎಂದು ಹೇಳುತ್ತಿದ್ದ ಸಿಐಡಿ ತನಿಖೆ ಮೇಲೆಯೇ ಕುಟುಂಬಸ್ಥರು ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ.
ಸಚಿನ್ ಪಾಂಚಾಳ ಆತ್ಮಹತ್ಯೆ ಕೇಸ್ ಸಿಐಡಿಗೆ ವರ್ಗಾವಣೆ ಹಿನ್ನೆಲೆ…ಬೀದರ್ ನಲ್ಲಿ ಬೀಡು ಬಿಟ್ಟ ಸಿಐಡಿ ಅಧಿಕಾರಿಗಳ ಟೀಂ…ಸಿಐಡಿ ಡಿವೈಎಸ್ಪಿ ಸುಲೇಮಾನ್ ತಹಸೀಲ್ದಾರ ನೇತ್ರತ್ವದಲ್ಲಿ ತನಿಖೆ ಚುರುಕು…ರೈಲ್ವೆ ಪೊಲೀಸ್ ರಿಂದ ಸಿಐಡಿಗೆ ಕೇಸ್ ವರ್ಗಾವಣೆ ಬೆನ್ನಲ್ಲೆ ತನಿಖೆ ಚುರುಕು.ಹೌದು ಯುವ ಗುತ್ತಿಗೆದಾರ ಕಂ ಸಿವಿಲ್ ಇಂಜಿನಿಯರ ಆತ್ಮಹತ್ಯೆ ಪ್ರಕರಣವನ್ನ ಸರಕಾರ ಸಿಐಡಿ ತನಿಖೆಗೆ ವರ್ಗಾವಣೆ ಮಾಡಿದ್ದರಿಂದಾ ಸಿಐಡಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ.
ಪುರುಷರ ಫಲವತ್ತತೆ ಹೆಚ್ಚಿಸೋಕು ಸೈ! ದೇಹದ ತೂಕ ಇಳಿಸೋಕು ಸೈ ಈ ಸಿಹಿ ಕುಂಬಳಕಾಯಿ
ಡಿವೈಎಸ್ಪಿ ಸುಲೇಮಾನ್ ತಹಶಿಲ್ದಾರರ ನೇತೃತ್ವದ ತನಿಖಾ ತಂಡ ಬೆಂಗಳೂರಿನಿಂದಾ ನಿನ್ನೆ ಬೆಳಗ್ಗೆ ಬೀದರ್ ಗೆ ಆಗಮಿಸಿತ್ತು. ಕೆಲಹೊತ್ತು ಹಬ್ಸಿಕೋಟ್ ಹೆಸ್ಟ್ ಹೌಸ್ ನಲ್ಲಿ ತಂಗಿದ್ದ ಸಿಐಡಿ ಟೀಂ ಅಲ್ಲಿ ಉಪಹಾರ ಸೇವಿಸಿ ಅಲ್ಲಿಂದ ನೇರವಾಗಿ ಬೀದರ್ ಎಸ್ಪಿ ಕಚೇರಿಗೆ ಆಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ, ಹಾಗೂ ಸಹಾಯಕ ಪೊಲೀಸ್ ವರಿಷ್ಠಾದಧಿಕಾರಿ ಚಂದ್ರಕಾಂತ್ ಪೂಜಾರಿ ಜೊತೆಗೆ ಈ ಕೇಸ್ ಹಿನ್ನೆಲೆ ಎರಡು ಗಂಟೂ ಹೆಚ್ಚು ಕಾಲ ಚರ್ಚೆ ನಡೆಸಿದ್ರು,.
ಸಿಐಡಿ ಅಧಿಕಾರಿಗಳಿಂದ ಎಸ್ಪಿ ಪ್ರದೀಪ್ ಗುಂಟೆ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್ ಗೆ ಕೆಲವು ಪ್ರಶ್ನೆಗಳನ್ನ ಕೆಳಿದ ಸಿಐಡಿ ಡಿವೈಎಸ್ಪಿ ಸುಲೆಮಾನ್ ತಹಶಿಲ್ದಾರರ.ಸಚಿನ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು,
ಅದನ್ನ ನೋಡಿದ ಸಚಿನ್ ಸಹೋದರಿಯರು ಗಾಂಧಿಗಂಜ್ ಪೊಲೀಸ್ ಠಾಣೆಗೆ ಬಂದು ನಮ್ಮ ಸಹೋದರ ಮಿಸಿಂಗ್ ಆಗಿದ್ದು ಅವರು ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿದ್ದಾರೆ ಹೀಗಾಗಿ ಅವರನ್ನ ಹುಡುಕಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ ಆದರೆ ಪೋಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಕಾರ ಮಾಡಿದ್ದಾರೆ ಈ ಬಗ್ಗೆ ಎಸ್ಪಿಯವರನ್ನ ಸಿಐಡಿ ಅಧಿಕಾರಿಗಳು ವಿವಿಧ ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತದೆ ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿದ್ರು.
ಬೀದರ್ ಎಸ್ಪಿ ಪ್ರದೀಪ್ ಗುಂಟೆ ಜೊತೆಗೆ ಕೇಸ್ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದಕೊಂಡ ಸಿಐಡಿ ಅಧಿಕಾರಿಗಳ ಟೀಂ ನೇರವಾಗಿ ರೈಲ್ವೇ ಪೊಲೀಸ್ ಠಾಣೆಗೆ ಆಗಮಿಸಿದ ರೈಲ್ವೇ ಸಿಪಿಐ ಅವರನ್ನ ತಮ್ಮ ಜೊತೆಗೆ ಕರೆದುಕೊಂಡು ಬಂದ ಸಿಐಡಿ ಟೀಂ ನೇರವಾಗಿ ಸಚಿನ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ಮಾಡಿದ್ರು, ನಂತರ ರೇಲ್ವೆ ಪೊಲೀಸ್ ಠಾಣೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳ ತಂಡ ಸುದೀರ್ಘ ಎರಡು ಗಂಟೆಗಳಿಂದ ರೇಲ್ವೆ ಪೊಲೀಸರಿಂದಾ ಮಾಹಿತಿ ಕಲೆ ಹಾಕಿದ್ರು,
ಈ ಸಚಿನ್ ಪ್ರಕರಣ ಮೊದಲು ರೈಲ್ವೆ ಪೊಲೀಸ್ ಠಾಣೆಯಲ್ಲಿಯೇ ಕೇಸ್ ದಾಖಲಾಗಿತ್ತು, ಹೀಗಾಗಿ ಕೇಸ್ ದಾಖಲಾಗುತ್ತಿಂದೆ ರೈಲ್ವೇ ಎಸ್ಪಿ ಸೌಮ್ಯಲತಾ ಎರಡು ದಿನ ಬೀದರ್ ನಲ್ಲಿ ವಾಸ್ತವ್ಯ ಹೂಡಿ ತನಿಖೆ ಕೈಗೊಂಡಿದ್ದರು ಹೀಗಾಗಿ ರೈಲ್ವೇ ಪೊಲೀಸರು ಕಲೆಹಾಕಿದ ಮಾಹಿತಿಯನ್ನ ಸಿಐಡಿ ಟೀಂ ಕಲೆಹಾಕಿದೆ..ನಿನ್ನೆ ಸಾಯಂಕಾಲ ಸಚಿನ ಮನೆಗೆ ಭೆಟಿ ನೀಡಿದ ಸಿಐಡಿ ತಂಡ ವಿವುಧ ಮಾಹಿತಿ ಕಲೆಹಾಕಿದ್ರು ನಿನ್ನೆ ಸಚಿನ ಮೃತಪಟ್ಟ ೯ನೇದಿನದ ತಿಥಿ ಕಾರ್ಯ ಮಾಡಿದು ಮನೆಯಲ್ಲಿ ಸೂತಕದ ಛಾಯೆ ಮೂಡಿದು ದುಃಖತ್ಪತರಾದ ಕುಟುಂಬದ ಸದಸ್ಯರು.
ಇನ್ನೂ ಆರಂಭದಿಂದಲೂ ಸಿಐಡಿ ತನಿಖೆಗೆ ವಿರೋಧಿಸುತ್ತಲೇ ಬಂದಿರುವ ಸಚಿನ್ ಕುಟುಂಬಸ್ಥರು ಸಿಬಿಐಗೆ ಸಚಿನ್ ಕೇಸ್ ಕೊಡುವಂತೆ ಒತ್ತಾಯಿಸಿಸುತ್ತಿದ್ದರು ಆದರೆ ಸರಕಾರ ಸಿಐಡಿ ತನಿಖೆಗೆ ಸಚಿನ್ ಕೇಸ್ವಕೊಟ್ಟಿದೆ ಸಿಐಡಿ ತನಿಖಾ ತಂಡಕೂಡಾ ಬೀದರ್ ಗೆ ಬಂದು ತನಿಖೆ ಚುರುಕುಗೊಂಡಿದೆ ಆದರೆ ಕುಟುಂಬಸ್ಥರು ಸಿಐಡಿ ತನಿಖೆಗೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದು ಸಿಐಡಿ ತನಿಖೆ ಯಾವಹಂತದಲ್ಲಿ ನಡೆಯುತ್ತದೆಂದು ನಾವು ನೋಡುತ್ತೇವೆ, ಸಿಐಡಿಯವರು ಯಾವ ರೀತಿ ತನಿಖೆ ಮಾಡುತ್ತಾರೆ, ಅದು ನಮಗೆ ಗೊತ್ತಾಗುತ್ತದೆ ಸಿಐಡಿ ತನಿಖೆ ಹೇಗೆ ಸಾಗುತ್ತೆದಂದು ನೋಡುತ್ತೆವೇ ನಮ್ಮಗೆ ಇದರಲಿ ನ್ಯಾಯ ಸಿದಿದರೆ ನಾವು ಬಿಡಲ್ಲ ಸಿಬಿಐಗೆ ಪ್ರಕರಣ ವರ್ಗಾವಣೆ ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆಂದು ನಮ್ಮ ತಮ್ಮಬೆರದ ಡೆತ್ ನೋಟನಲ್ಲಿ ಇದಗದೆ ಜನರಿಗೆ ಬಂಧನ ಮಾಡಿಲ್ಲ ನಮ್ಮಗೆ ನಾವೇ ಆರೋಪಿ ಯಂತೆ ನಮ್ಮನು ನೋಡುತಿದ್ದರೆ ಸಚಿನ ಸಹೋದರಿ ಸುರೆಖಾ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಆರಂಭದಿಂದಾ ಸಿಬಿಐ ತನಿಕೆಗೆ ಒತ್ತಾಯಿಸಿಸುತ್ತಿದ್ದ ಸಚಿನ ಸಹೋದರಿಯರ ಮನವಿ ಸರಕಾರ ಜಗ್ಗಿಲ್ಲಾ. ಅದರ ಬದಲಾಗಿ ಸಿಐಡಿ ತನಿಖೆಗೆ ಸರಕಾರ ಆದೇಶ ಮಾಡಿದ ಬೆನ್ನಲ್ಲೇ ಸಿಐಡಿ ಟೀಂ ಬೀದರ್ ನಲ್ಲಿ ಬೀಡು ಬಿಟ್ಟಿದ್ದು ತನಿಖೆ ನಡೆಸುತ್ತಿದ್ದಾರೆ. ಆದರೆ ಸಿಐಡಿ ತನಿಖೆಯನ್ನ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿರುವ ಸಚಿನ ಸಹೋದರಿಯರು ಸಿಐಡಿ ತನಿಖೆಗೆ ನಾವು ಸಾಥ್ ಕೊಡುತ್ತೇವೆ, ಆದರೆ ತನಿಖೆ ದಾರಿ ತಪ್ಪಿದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲಾ ಎಂದು ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದಾರೆ.