ಬೆಂಗಳೂರು: ಈ ಬಾರಿಯ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ (Virat Kohli) ತಮ್ಮ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ, ಸಚಿನ್ (Sachin Tendulkar) 49 ಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸಚಿನ್ ಹಾಗೂ ಕೊಹ್ಲಿ ಶತಕಗಳನ್ನು ಎಲ್ಲೆಲ್ಲಿ ಬಾರಿಸಿದರು ಅನ್ನೋ ಕುತೂಹಲ ನಿಮಗಿದ್ದರೆ ಮುಂದೆ ಓದಿ.
ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಸಚಿನ್ 20 ಶತಕ ದಾಖಲಿಸಿದರೆ ಕೊಹ್ಲಿ 23 ಶತಕ ದಾಖಲಿಸಿದ್ದಾರೆ.
ವಿದೇಶದಲ್ಲಿ ನಡೆದ ಪಂದ್ಯಗಳಲ್ಲಿ ಸಚಿನ್ 12 ಶತಕ ಬಾರಿಸಿದರೆ, ಕೊಹ್ಲಿ 21 ಶತಕ ಬಾರಿಸಿದ್ದಾರೆ.
ತಟಸ್ಥ ಕೇಂದ್ರಗಳಲ್ಲಿ ನಡೆದ ಪಂದ್ಯಗಳಲ್ಲಿ ಸಚಿನ್ 17 ಸೆಂಚುರಿ ಗಳಿಸಿದ್ದು, ಕೊಹ್ಲಿ 5 ಶತಕ ಬಾರಿಸಿದ್ದಾರೆ.
ಸಚಿನ್ ದಾಖಲೆಯನ್ನು ಒಟ್ಟು 12 ರಾಷ್ಟ್ರಗಳಲ್ಲಿ ಮಾಡಿದ್ದರೆ, ಕೊಹ್ಲಿ 9 ರಾಷ್ಟ್ರಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಸಚಿನ್ 34 ಕ್ರೀಡಾಂಗಣದಲ್ಲಿ 49 ಶತಕ ದಾಖಲಿಸಿದ್ದರೆ, ಕೊಹ್ಲಿ 32 ಕ್ರೀಡಾಂಗಣದಲ್ಲಿ 49 ಶತಕ ದಾಖಲಿಸಿದ್ದಾರೆ.
ಸಚಿನ್ 6 ತಂಡದ ವಿರುದ್ಧ 5 ಅಥವಾ 5ಕ್ಕೂ ಹೆಚ್ಚು ಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾ (Australia) ವಿರುದ್ಧ 9 ಶತಕ ದಾಖಲಿಸಿದ್ದೇ ತಂಡವೊಂದರ ವಿರುದ್ಧ ಸಚಿನ್ ಬಾರಿಸಿದ ಗರಿಷ್ಟ ಶತಕವಾಗಿದೆ.
ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ 10 ಶತಕ ದಾಖಲಿಸಿದ್ದೇ ತಂಡವೊಂದರ ವಿರುದ್ಧ ಬಾರಿಸಿದ ಗರಿಷ್ಟ ಶತಕ. 6 ದೇಶಗಳ ವಿರುದ್ಧ ಕೊಹ್ಲಿ 5 ಅಥವಾ ಐದಕ್ಕಿಂತ ಹೆಚ್ಚು ಶತಕ ದಾಖಲಿಸಿದ್ದಾರೆ.