ಬೆಂಗಳೂರು: ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಇಲ್ಲದಿದ್ದರೆ ನ್ಯಾಯ ಸಿಗಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವಂತೆ ಅವರ ಕುಟುಂಬ ಆಗ್ರಹಿಸಿದೆ. ಸಿಬಿಐಗೆ ವಹಿಸಬೇಕು, ಇಲ್ಲದಿದ್ದರೆ ನ್ಯಾಯ ಸಿಗಲ್ಲ.
SSLC, ITI, ಡಿಗ್ರಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ! ಈಗಲೇ ಅರ್ಜಿ ಹಾಕಿ – ಕೈ ತುಂಬಾ ಸಂಬಳ
ಆದರೆ ಪ್ರಿಯಾಂಕ್ ಖರ್ಗೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ನಮಗೆ ಸವಾಲ್ ಹಾಕಿದ್ದಾರೆ. ನೀವು ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡಲ್ಲ ಎಂದು ಸವಾಲ್ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ರೈಟು ಲೆಫ್ಟ್ನಲ್ಲಿವವರೇ ಆತ್ಮಹತ್ಯೆಗೆ ಕಾರಣೀಕರ್ತರು. ನಿಮಗೆ ಉತ್ತರ ಕೊಡಲು ಭಯನಾ? ಪ್ರಿಯಾಂಕ್ ಖರ್ಗೆ ಉದ್ಧಟತನ ಬದಿಗಿರಿಸಬೇಕು, ಸ್ವಪ್ರತಿಷ್ಠೆ ಬಿಡಬೇಕು ಎಂದು ಕಿಡಿಕಾರಿದ್ದಾರೆ.