ಬೆಂಗಳೂರು: ರಾಜ್ಯದಲ್ಲಿ ಎಗ್ಗಿಲ್ಲದೇ ಟ್ರಾನ್ಸ್ಫರ್ ದಂಧೆ ನಡೆಯುತ್ತಿದ್ಯಾ ಎಂಬ ಅನುಮಾನ ಮೂಡಿದ್ದು, ಟ್ರಾನ್ಸ್ಫರ್ ಬಗ್ಗೆ ಕಾಂಗ್ರೆಸ್ ನಾಯಕನ ಸ್ಫೋಟಕ ಆಡಿಯೋ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕ ಉಮಾಪತಿಗೌಡ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ಜೊತೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ಸ್ಪೆಕ್ಟರ್ ಟ್ರಾನ್ಸ್ಫರ್ಗೆ ಉಮಾಪತಿಗೌಡ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಅದೇ ಠಾಣೆಯಲ್ಲಿ ಉಳಿಸಲು ಇನ್ಸ್ಪೆಕ್ಟರ್ ಹಣ ನೀಡಿದ್ದಾರೆ. ಈ ಹಣವನ್ನ ಹೋಂ ಮಿನಿಸ್ಟರ್ಗೆ ಕೊಟ್ಟಿರೋ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪ ಮಾಡಲಾಗಿದೆ. ಸಚಿವರಿಗೆ ಹಣ ಕೊಟ್ಟಿರೋದಾಗಿ ಉಮಾಪತಿಗೌಡ ಹೇಳಿದ್ದಾರೆ. ನಾನು ಹೇಳಿದರೇ ನಮ್ಮ ಸರ್ಕಾರದಲ್ಲಿ ಕೆಲಸ ಆಗೇ ಆಗುತ್ತೆ ಎಂದು ಕಾಂಗ್ರೆಸ್ ನಾಯಕ ಉಮಾಪತಿಗೌಡ ಹೇಳಿದ್ದಾರೆ.