ಕೊಪ್ಪಳ: ಗಂಗಾವತಿ ರೀಡ್ಸ್ ಸಂಸ್ಥೆಯ ಕಛೇರಿಯಲ್ಲಿ ಯುವತಿಯರಿಗೆ ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ರೀಡ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕರಾದ ಸಿ .ತಿಪ್ಪೇಶಪ್ಪ ಸರ್ ರವರು ತರಬೇತಿ ನೀಡಿದರು.
ತರಬೇತಿಯಲ್ಲಿ ವ್ಯಾಪಾರದ ಗುಣಲಕ್ಷಣಗಳ ಬಗ್ಗೆ ತಿಳಿಸಿದರು.
1) ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯವನ್ನು ಮಾಡುವ ಬಗ್ಗೆ.
2) ವ್ಯಾಪಾರದಲ್ಲಿ ಹೊಸತನವನ್ನು ಬಳಸಿಕೊಂಡು ಆದಾಯವನ್ನು ಹೆಚ್ಚಿಸುವುದು.
3) ಅನ್ವೇಷಣೆ.
4) ವ್ಯಾಪಾರದಲ್ಲಿ ತಾಳ್ಮೆ ಮತ್ತು ಉತ್ತಮವಾದ ಮಾತನಾಡುವ ಕೌಶಲ್ಯ ಗಳನ್ನು ಹೊಂದಿದರೆ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ತರಬೇತಿ ನೀಡಿದರು.
5) ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕು.
6) ಸ್ವಪ್ರೇರಣೆ ಇರಬೇಕು ಮತ್ತು ಸತತವಾಗಿ ಪ್ರಯತ್ನ ಪಟ್ಟರೆ ಯಶಸ್ಸು ಜೀವನದಲ್ಲಿ ಸಿಗುತ್ತದೆ ಎಂದು ತಿಳಿಸಿದರು.
ಕೊಪ್ಪಳ ತಾಲ್ಲೂಕ ಮತ್ತು ಗಂಗಾವತಿ ತಾಲ್ಲೂಕು ಯುವತಿಯರಿಗೆ ಮತ್ತು ರೀಡ್ಸ್ ಸಿಬ್ಬಂದಿಗಳು ಸೇರಿ ಒಟ್ಟು 32 ಜನ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.