ಬೆಂಗಳೂರು: ಮಾಜಿ ಸಂಸದ ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ ಮಳಿಗೆ ಮಾಲೀಕರಿಗೆ 8 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಗೊತ್ತಿಲ್ಲದೆ ಯಾರು ಇನ್ನೊಬ್ಬ ತಂಗಿ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪೊಲೀಸ್ ಕಮೀಷನರ್ಗೆ ಪತ್ರ ಬರೆದು ಸಮಗ್ರ ತನಿಖೆ ಮಾಡಿ ಶಿಕ್ಷೆ ನೀಡುವಂತೆ ಮನವಿ ಮಾಡುತ್ತೇನೆ. ಸಿನಿಮಾದವರು ಏನೇನ್ ಮಾಡ್ತಾರೋ, ಇದೆಲ್ಲ ಬರೋದು ಸಿನಿಮಾದವರಿಗೆ ತಾನೆ.
ನಿಮಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ..? ತುಂಬಾ ಡೇಂಜರ್ ಇದು!
ಪೊಲೀಸ್ ಆಧಿಕಾರಿಗಳ ಬಳಿ ಮಾತನಾಡುತ್ತೇನೆ. ಐಶ್ವರ್ಯ ಅವರು ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು, ಆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ನಮ್ಮಣ್ಣ ಬೇಜಾರ್ ಮಾಡ್ಕೊಂಡ್ ಬಿಟ್ಟಾನಂತೆ, ನನಗೆ ಗೊತ್ತಿಲ್ಲದೆ ಯಾರು ಇನ್ನೊಬ್ಬ ತಂಗಿ ಎಂದು. ನಾನೇ ಪೊಲೀಸರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.