ಆಂದ್ರಪ್ರದೇಶ: ನಾಳೆ ವೈಕುಂಠ ಏಕಾದಶಿ, ದೇಶದೆಲ್ಲೆಡೆ ಶ್ರೀನಿವಾಸನ ಆರಾಧನೆಗೆ ಜನ ಸಕಲ ಸಿದ್ದತೆ ನಡೆಸುತ್ತಿದ್ದಾರೆ. ರಾಜ್ಯದ ಹಲವೆಡೆ ಶ್ರೀನಿವಾಸನ ದೇವಾಲಯಗಳಲ್ಲಿ ಶುದ್ದ ಕಾರ್ಯಗಳು ನಡೆಯುತ್ತಿವೆ. ಆದರೆ ಇದೇ ಹೊತ್ತಿನಲ್ಲಿ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ದುರಂತ ಘಟನೆ ನಡೆದಿದೆ.
ರುಮಲದಲ್ಲಿನ ವೆಂಕಟೇಶ್ವರ ಸ್ವಾಮಿ ದರ್ಶನದ ಟೋಕನ್ ಟಿಕೆಟ್ ಪಡೆಯುವಾಗ ಉಂಟಾದ ಕಾಲ್ತುಳಿತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಾಳಗಳನ್ನು ಎಸ್ವಿಆರ್ ರುಯಾ ಸರ್ಕಾರಿ ಜನರಲ್ ಆಸ್ಪತ್ರೆ ಮತ್ತು ಎಸ್ವಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ಮುಂದೆ Accident ಆದ್ರೆ ತಲೆ ಬಿಸಿ ಮಾಡ್ಕೊಬೇಡಿ..! ಮೋದಿ ಸರ್ಕಾರವೇ ಭರಿಸಲಿದೆ ಚಿಕಿತ್ಸಾ ವೆಚ್ಚ..!
ಈ ಘಟನೆಯ ಸಂಭಂಧ ಮೃತ ಭಕ್ತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ತಿರುಪತಿ ನಗರದ ಬೈರಾಗಿಪಟ್ಟೇಡದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 48 ಜನರು ಅಸ್ವಸ್ಥರಾಗಿದ್ದಾರೆ.
ತಿರುಪತಿ-ತಿರುಮಲದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರ ಬಾಬು ನಾಯ್ಡು ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಇದೀಗ ಪರಿಹಾರ ಘೋಷಣೆ ಮಾಡಿದೆ. ಆಂಧ್ರ ಪ್ರದೇಶ ಸರ್ಕಾರದಿಂದ ಮೃತ ಭಕ್ತಾದಿಗಳಿಗೆ ತಲಾ ₹25 ಲಕ್ಷ ಪರಿಹಾರ ಘೋಷಣೆ ಮಾಡಿ ಆದೇಶಿಸಿದೆ. ಮೃತರ ಕುಟುಂಬಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪರಿಹಾರ ಘೋಷಿಸಿದ್ದಾರೆ.