ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಮುಖಾಮುಖಿ ಆಗುತ್ತಿದ್ದು, ಈ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Prahlad Joshi: ರೈತರ ಮೇಲೆ ನಿಜಕ್ಕೂ ಕಾಳಜಿ ಇಲ್ಲದ ಸರ್ಕಾರ ಕಾಂಗ್ರೆಸ್ -ಪ್ರಹ್ಲಾದ್ ಜೋಶಿ
ಸಂಜು ಸ್ಯಾಮ್ಸನ ನೇತೃತ್ವದ ರಾಜಸ್ಥಾನ ತಂಡಕ್ಕೆ ಇದು ನಾಲ್ಕನೇ ಪಂದ್ಯವಾಗಿದ್ದು, ಅತ್ತ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ ತನ್ನ ಐದನೇ ಪಂದ್ಯವನ್ನು ಆಡಲಿದೆ. ಟೂರ್ನಿಯಲ್ಲಿ ಉಭಯ ತಂಡಗಳು ಭಿನ್ನ ಆರಂಭ ಪಡೆದಿವೆ. ಆರ್ಸಿಬಿ ತಂಡವು ಒಂದು ಪಂದ್ಯದಲ್ಲಿ ಮಾತ್ರ ಗೆದ್ದು ಮೂರರಲ್ಲಿ ಸೋಲು ಕಂಡಿದೆ. ಅತ್ತ ರಾಜಸ್ಥಾನ ತಂಡ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದು ಭರ್ಜರಿ ಆರಂಭ ಪಡೆದಿದೆ.
ರಾಜಸ್ಥಾನ ತಂಡವು 3 ಪಂದ್ಯಗಳಿಂದ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ ಹೊರತುಪಡಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಏಕೈಕ ತಂಡ ಆರ್ಆರ್. ಮತ್ತೊಂದೆಡೆ, ಆರ್ಸಿಬಿ ತಂಡವು 4 ಪಂದ್ಯಗಳಿಂದ ಒಂದರಲ್ಲಿ ಮಾತ್ರ ಗೆದ್ದು 2 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ಸೋಲಿನೊಂದಿಗೆ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದ ಆರ್ಸಿಬಿ, ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ತವರಿನ ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿತು. ಆ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಕೆಕೆಆರ್ ವಿರುದ್ಧ 7 ವಿಕೆಟ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 28 ರನ್ಗಳಿಂದ ಸೋತಿತು.
ಪಿಂಕ್ ಸಿಟಿ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದ ಪಿಚ್ ಬ್ಯಾಟರ್ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ, ಮೈದಾನದ ಬೌಂಡರಿಗಳು ದೊಡ್ಡದಾಗಿದ್ದು, ಪವರ್ಫುಲ್ ಹೊಡೆತದ ಅಗತ್ಯವಿದೆ. ಇದೇ ವೇಳೆ ಅತಿಯಾದ ಬಿಸಿಲಿನಿಂದಾಗಿ ಹೆಚ್ಚಿನ ತಾಪಮಾನ ಆಟಗಾರರನ್ನು ಕಾಡಲಿದೆ. ಈ ಮೈದಾನದಲ್ಲಿ ಚೇಸಿಂಗ್ ಮಾಡಿದ ತಂಡಗಳು 54 ಪಂದ್ಯಗಳಲ್ಲಿ 34ರಲ್ಲಿ ಗೆದ್ದಿವೆ. ಹೀಗಾಗಿ ಟಾಸ್ ಗೆಲ್ಲೋ ತಂಡಗಳು ಬೌಲಿಂಗ್ ಮಾಡಲು ಆದ್ಯತೆ ನೀಡುತ್ತವೆ. ಈ ಮೈದಾನದಲ್ಲಿ ಐಪಿಎಲ್ನಲ್ಲಿ ಇದುವರೆಗೂ ಯಾವುದೇ ತಂಡ ಕೂಡಾ 200 ರನ್ ಗಳಿಸಿಲ್ಲ. ರಾಜಸ್ಥಾನ ತಂಡವು ಎರಡು ಬಾರಿ ಗಳಿಸಿದ 197 ರನ್ ಈವರೆಗಿನ ಗರಿಷ್ಠ ಸ್ಕೋರ್ ಆಗಿದೆ.
ಪಂದ್ಯ ಆರಂಭದ ಸಮಯದಲ್ಲಿ ಜೈಪುರದಲ್ಲಿ ತಾಪಮಾನವು ಸುಮಾರು 32 ಡಿಗ್ರಿಗಳಷ್ಟಿರುವ ಮುನ್ಸೂಚನೆ ಇದೆ. ಪಂದ್ಯ ಮುಂದುವರೆದಂತೆ ವಾತಾವರಣ ತುಸು ತಣ್ಣಗಾಗಲಿದ್ದು, ಪಂದ್ಯದ ಅಂತ್ಯದ ವೇಳೆಗೆ ತಾಪಮಾನ 27 ಡಿಗ್ರಿಗಳಿಗೆ ಇಳಿಯುತ್ತದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.