ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಜರ್ಸಿ ಫೋಟೋ ಲೀಕ್ ಆಗಿದೆ. IPL ಆರಂಭಕ್ಕೆ ಇನ್ನೇನೂ ದಿನಗಣನೆ ಆರಂಭವಾಗಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳ ಹೊಸ ಕಿಟ್ ಅನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಆರ್ಸಿಬಿ ತಂಡದ ನೂತನ ಜೆರ್ಸಿಯ ವಿನ್ಯಾಸ ಕೂಡ ರೆಡಿಯಾಗಿದೆ.
ನೂತನ ಜರ್ಸಿ ಜೊತೆ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದುಬೈನ ಹೊಟೇಲ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ದುಬೈನಲ್ಲಿರುವ ಕೊಹ್ಲಿಯು ಆರ್ಸಿಬಿ ತಂಡದ ಜೆರ್ಸಿಯ ಫೋಟೋಶೂಟ್ನಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಧರಿಸಿರುವ ನೂತನ ಆರ್ಸಿಬಿ ತಂಡದ ಜೆರ್ಸಿಯೊಂದರ ಫೋಟೋ ಕೂಡ ಲೀಕ್ ಆಗಿದೆ. ಸದ್ಯ ಲೀಕ್ ಆಗಿರುವ ಫೋಟೋದಂತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ಪು ಮತ್ತು ಕೆಂಪು ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.