ಹುಬ್ಬಳ್ಳಿ: ರೌಡಿಶೀಟರ್ಗಳು ಪೊಲೀಸರು ಹೇಳಿದಂತೆ ಕೇಳಬೇಕು. ಪ್ರಕರಣ ಮುಗಿದು ಹೋಗಿದೆ ಎಂದು ಅಡ್ಡಾದಿಡ್ಡಿ ಮಾಡುವಂತಿಲ್ಲ. ನಿಮ್ಮ ಚಲನವಲನಗಳ ಮೇಲೆ ನಮ್ಮ ಇಲಾಖೆಯ ನಿಗಾ ಸದಾ ಇರಲಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಖಡಕ್ ಸಂದೇಶ ರವಾನಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಲ್ಲಿಯ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ರೌಡಿಶೀಟರ್ಗಳ ಪರೇಡ್ನಲ್ಲಿ ಅವರು ಮಾತನಾಡಿದರು.
ಗೂಂಡಾ ಕಾಯ್ದೆ ಮತ್ತು ಗಡಿಪಾರು ಪ್ರಕ್ರಿಯೆ ನಡೆಸಲು ಪೊಲೀಸ್ ಇಲಾಖೆಯಲ್ಲಿ ನಿಯಮಾವಳಿಗಳಿವೆ. ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಅಸಡ್ಡೆ ಈಗಲೇ ಬಿಡಬೇಕು ಎಂದು ಎಚ್ಚರಿಕೆ ನೀಡಿದರು.
ಪರೇಡ್ಗೆ ಆಗಮಿಸಿರುವ ರೌಡಿಶೀಟರ್ಗಳನ್ನು ಡಿ. 31ರಂದು ಸಂಜೆ ಆಯಾ ಠಾಣೆ ವ್ಯಾಪ್ತಿಯಲ್ಲಿ ಕರೆತರಬೇಕು. ಹೊಸ ವರ್ಷಾಚರಣೆ ಮುಗಿಯುವವರೆಗೆ ಪ್ರತಿಯೊಬ್ಬರ ಮಾಹಿತಿ ಕಲೆ ಹಾಕಬೇಕು. ಅವರು ವಾಸಿಸುವ ಮನೆ, ಅಡ್ಡೆ, ಮೊಬೈಲ್ ಫೋನ್ ಟ್ರ್ಯಾಕ್ಗಳನ್ನು ಪರಿಶೀಲಿಸಬೇಕು. ಪಿಎಸ್ಐಗಳು ಇದರ ಜವಾಬ್ದಾರಿ ಹೊರಬೇಕು ಎಂದು ಸೂಚನೆ ನೀಡಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ, ಯಲ್ಲಪ್ಪ ಕಾಶಪ್ಪನವರ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯಕ್, ಡಾ. ಶಿವರಾಜ ಕಟಕಭಾವಿ, ವಿನೋದ ಮುತ್ತೇದಾರ, ಪ್ರಶಾಂತ ಸಿದ್ದನಗೌಡ್ರ, ಸಣ್ಣತಮ್ಮಯ್ಯ ಒಡೆಯರ್ ಇತರರು ಇದ್ದರು.