ಕೋಲಾರ:-ಕೊಲೆ, ಸುಲಿಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಕಾಲಿಗೆ ಕೆಜಿಎಫ್ ಪೊಲೀಸರು ಗುಂಡು ಹಾರಿಸಿದ್ದಾರೆ.
ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆ ಆಯ್ತಾ!?- ಪೇಜಾವರ ಶ್ರೀ ಕೊಟ್ರೂ ಕಾರಣ!
ಸ್ಟಾಲಿನ್ ಎಂಬ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಲಾಗಿದೆ. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆಯೆ ಹಲ್ಲೆಗೆ ಮುಂದಾಗಿದ್ದಾನೆ. ಪೋಲೀಸರ ಮೇಲೆ ಮಚ್ಚಿನಿಂದ ರೌಡಿಶೀಟರ್ ಹಲ್ಲೆ ಮಾಡಿದ್ದ. ಪೊಲೀಸರಿಂದ ರೌಡಿ ಶೀಟರ್ ಬಲ ಕಾಲಿಗೆ ಗುಂಡು ಹಾರಿಸಲಾಗಿದೆ.
ಪೊಲೀಸ್ ಪೇದೆ ಸುನಿಲ್ ಎಂಬುವವರಿಗೆ ಗಾಯವಾಗಿದ್ದು, ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಅಂಡರ್ ಸನ್ ಪೇಟೆಯಲ್ಲಿ ಘಟನೆ ಜರುಗಿದೆ.