ಬೆಂಗಳೂರು: ರೌಡಿಶೀಟರ್ ಸಹದೇವ್ ಹತ್ಯೆ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸರಿಂದ 8 ಆರೋಪಿಗಳನ್ನ ಬಂಧಿಸಲಾಗಿದೆ. ವಿನಯ್, ಧರ್ಮ ಸೇರಿ ಎಂಟು ಮಂದಿ ಬಂಧಿತ ಆರೋಪಿಗಳು
ದೀಪಾವಳಿ: ಹಸಿರು ಪಟಾಕಿಗೆ ಮಾತ್ರ ಅವಕಾಶ: ಪಟಾಕಿ ಸಿಡಿಸಲು ಇರುವ ಕಡ್ಡಾಯ ನಿಯಮಗಳೇನು? ಇಲ್ಲಿದೆ ಮಾಹಿತಿ
ಗಣೇಶ ಹಬ್ಬದಿಂದಲೂ ಗಲಾಟೆ ಮಾಡಿಕೊಳ್ಳುತ್ತಿದ್ದ ಗ್ಯಾಂಗ್ ಗಣೇಶ ಬಿಡುವ ವಿಚಾರಕ್ಕೆ ಸಹದೇಹ ಮತ್ತು ವಿನಯ್ ನಡುವೆ ಗಲಾಟೆ.. ಈ ವೇಳೆ ಆರೋಪಿ ವಿನಯ್ ಮೇಲೆ ಹಲ್ಲೆ ಮಾಡಿದ್ದ ಸಹದೇವ. ನಂತರ ಆರೋಪಿ ವಿನಯ್ ತಮ್ಮನ ಮೇಲೂ ಹಲ್ಲೆ ಮಾಡಿದ್ದ ಸಹದೇವ.. ನಂತರ ನವೆಂಬರ್ 8 ರಂದು ಟೀ ಕುಡಿಯಲು ಬಂದಿದ್ದ ಸಹದೇವ.. ಈ ವೇಳೆ ಅಲ್ಲಿಯೇ ಇದ್ದ ವಿನಯ್ ಗ್ಯಾಂಗ್.ಕ್ಷುಲ್ಲಕ ವಿಚಾರಕ್ಕೆ ವಿನಯ್ ಸಹದೇವ ನಡುವೆ ಕಿರಿಕ್.
ಯಾಕೆ ಅವತ್ತು ಕೊಟ್ಟಿದ್ದು ಸಾಕಾಗಿಲ್ವಾ ಎಂದಿದ್ದ ಸಹದೇವ.. ಈ ವೇಳೆ ಮಾರಕಾಸ್ತ್ರಗಳಿಂದ ಸಹದೇವ ಮೇಲೆ ಅಟ್ಯಾಕ್ ಮಾಡಿದ ವಿನಯ್ ಗ್ಯಾಂಗ್.. ವಿನಯ್, ಧರ್ಮನಿಂದ ಸಹದೇವನ ಮೇಲೆ ಅಟ್ಯಾಕ್.. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ ಸಹದೇವ.. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಪುಟ್ಟೇನಹಳ್ಳಿ ಪೊಲೀಸರು..