ಬಾಗಲಕೋಟೆ: ಸ್ವಾಮಿ ವಿವೇಕಾನಂದರ ಜೀವನ,ಆದರ್ಶ ತತ್ವಗಳನ್ನು ಹಾಗೂ ದೇಶದ ಪ್ರಗತಿಗೆ ಸ್ವಾಮಿ ವಿವೇಕಾನಂದರು ನೀಡಿರುವ ಸಲಹೆಗಳನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಳ್ಳಬೇಕೆಂದು ಹಿರಿಯ ಕಲಾವಿದ ಮಲ್ಲಪ್ಪ ಗಣಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ 161 ನೇ ಜಯಂತೋತ್ಸವ ಹಾಗೂ ಸಂಘದ 19 ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು.
ಪ್ರತಿಯೊಬ್ಬ ಯುವಕರು ದೇಶದ ಪ್ರಗತಿಗೆ ಸಹಾಯವಾಗುವ ಸಾಧನೆಗಳನ್ನು ಮಾಡಬೇಕು ಕ್ರಿಯಾ ಶಕ್ತಿ,ಇಚ್ಚಾ ಶಕ್ತಿ ಜ್ಞಾನ ಶಕ್ತಿ ಈ ಮೂರನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕೆಂದು ಯುವಕರಿಗೆ ಕಿವಿ ಮಾತು ಹೇಳಿದರು.
ತಾಪಂ ಮಾಜಿ ಸದಸ್ಯ ಗುರುಪಾದಯ್ಯ ಮರಡಿಮಠ ಮಾತನಾಡಿ ಪ್ರತಿಯೊಬ್ಬ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ಮಾರ್ಗದಿಂದ ನಡೆದರೆ ನಿಜವಾಗಿಯು ಸಂಘವನ್ನು ಸ್ಥಾಪನೆ ಮಾಡಿದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು, ಇದೇ ಸಂದರ್ಭದಲ್ಲಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಆನಂದ ಕಂಪು, ಗ್ರಾಪ ಅಧ್ಯಕ್ಷೆ ಯಮನವ್ವ ಕಂಚು,ಈರಪ್ಪ ಬಡಿಗೇರ,ಕಾಶಪ್ಪ ನಾಯಕ,ಬಸವರಾಜ ಗಣಿ,ಸಿದ್ದು ಕಂಚು,ರಾಜು ಕದಂ,ಹಣಮಂತ ನಾವಿ,ಈರಪ್ಪ ಖಡಕಬಾವಿ,ಗಂಗಪ್ಪ ಅಮ್ಮಲಜೇರಿ,ಸಿ ಆರ್ ಸುತಾರ,ಸುರೇಶ ಬಿರಡಿ,ಮಹಾಂತೇಶ ಬಿದರಿ,ಸಂಘದ ಕಾರ್ಯದರ್ಶಿ ಶ್ರೀಶೈಲ ಗಣಿ,ಶ್ರೀಕಾಂತ ವಾಲಿ,ರಾಜು ಬಡಿಗೇರ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ