ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ (BGT) ಸರಣಿಯು ಭಾರತ ಪಾಲಿಗೆ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದು ತಿಳಿದೇ ಇದೆ. ಈ ನಿಟ್ಟಿನಲ್ಲಿ ತಂಡದ ಪ್ರಮುಖ ವೇಗಿಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಉಪಸ್ಥಿತಿಯು ತಂಡಕ್ಕೆ ಖಂಡಿತವಾಗಿಯೂ ಬಲ ತುಂಬಲಿದೆ.
ಈ ಬಗ್ಗೆ ಕೆಲ ವಾರಗಳಿಂದ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದ್ದು ಮಾಧ್ಯಮಗಳಲ್ಲೂ ಅನೇಕ ವರದಿಗಳು ಪ್ರಕಟವಾಗಿವೆ. ಈ ಬಗ್ಗೆ ಅಕ್ಟೋಬರ್ 2ರಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಶಮಿ, ಯಾಕೆ ಇಂತಹ ಆಧಾರರಹಿತ ಗಾಳಿಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ಬಾರ್ಡರ್ – ಗವಾಸ್ಕರ್ ಟ್ರೋಫಿಗೆ ನಾನು ಅಲಭ್ಯ ಎಂದು ಬಿಸಿಸಿಐ ಆಗಲಿ ಅಥವಾ ನಾನಾಗಲಿ ಈ ವೆರೆಗೂ ತಿಳಿಸಿಲ್ಲ. ಹೀಗಾಗಿ ಇಂತಹ ಅನಧಿಕೃತ ಮೂಲಗಳ ಸುದ್ದಿಗೆ ಜನ ಗಮನ ಕೊಡಬಾರದು ಎಂದು ವಿನಂತಿಸುತ್ತೇನೆ.
ಪ್ರಸ್ತುತ ಶಮಿ ಅವರು ಎನ್ ಸಿಎನಲ್ಲಿ ಫಿಸಿಯೋಗಳ ಜೊತೆಗಿದ್ದಾರೆ. ಅವರು ಫಿಟ್ ಆಗಿ ತಂಡಕ್ಕೆ ಮರಳಲಿ ಎಂದು ನಾವು ಆಶಿಸುತ್ತೇವೆ. ಅವರು ಶೇ.100ರಷ್ಟು ಫಿಟ್ ಆಗುವುದನ್ನು ನಾವು ಬಯಸುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಅರ್ಧಂಬರ್ಧ ಗುಣಮುಖರಾದ ಶಮಿಯನ್ನು ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗಲು ನಾವು ಇಚ್ಛಿಸುವುದಿಲ್ಲ. ಇದು ಸರಿಯಾದ ನಿರ್ಧಾರ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.