2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಟ್ರೋಫಿ ಗೆದ್ದುಕೊಟ್ಟ ಬಳಿಕ ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿಗೆ ಅಂತ್ಯ ಹಾಡಿದರು.
ಇದೀಗ ಟಿ20 ಕ್ರಿಕೆಟ್ನಲ್ಲಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರೋಹಿತ್ ಶರ್ಮಾ (37) ಮತ್ತು ವಿರಾಟ್ ಕೊಹ್ಲಿ (36) ನಿವೃತ್ತಿ ಮೊರೆ ಹೋಗಿದ್ದಾರೆ. ಆದರೂ ಟೆಸ್ಟ್ ಕ್ರಿಕೆಟ್ ಮತ್ತು ಒಡಿಐ ಕ್ರಿಕೆಟ್ನಲ್ಲಿ ತಮ್ಮ ಸೇವೆ ಮುಂದುವರಿಸಲಿದ್ದಾರೆ. ಪ್ರಮುಖವಾಗಿ 2027ರಲ್ಲಿ ಆಫ್ರಿಕಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಟ್ರೋಫಿ ಗೆದ್ದುಕೊಟ್ಟು ಕ್ರಿಕೆಟ್ ಬದುಕಿಗೆ ಅಂತ್ಯ ಹಾಡುವುದು ಈ ಸ್ಟಾರ್ಗಳ ಲೆಕ್ಕಾಚಾರವಾಗಿದೆ
ವೈಟ್ಬಾಲ್ಗೆ ಸಂಪೂರ್ಣ ಗುಡ್ ಬೈ ಹೇಳ್ತಾರಾ ಕೊಹ್ಲಿ..? ಜಸ್ಟ್ ಏಳೇ ಏಳು ತಿಂಗಳಲ್ಲಿ ಉತ್ತರ
ದಕ್ಷಿಣ ಆಫ್ರಿಕಾದಲ್ಲಿ ಉಂದಿನ ಒಡಿಐ ವಿಶ್ವಕಪ್ ಆಯೋಜನೆ ಆಗುವ ಹೊತ್ತಿಗೆ ರೋಹಿತ್ ಮತ್ತು ಕೊಹ್ಲಿಗೆ ಕ್ರಮವಾಗಿ 40 ಮತ್ತು 39 ವರ್ಷ ವಯಸ್ಸಾಗಿರುತ್ತದೆ. ಹೀಗಾಗಿ ಈ ಇಬ್ಬರೂ ಆಟಗಾರರಿಗೆ ಮತ್ತೊಂದು ವಿಶ್ವಕಪ್ ಭಾಗ್ಯ ಇಲ್ಲ ಎಂದು ಅಮಿತ್ ಮಿಶ್ರಾ, ಯೂಟ್ಯೂಬರ್ ಶುಭಾಂಕರ್ ಮಿಶ್ರಾ ಅವರ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
“ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಬದುಕು ಅಂತಿಮ ಘಟ್ಟದಲ್ಲಿದ್ದು, ಹೆಚ್ಚೆಂದರೆ ಇನ್ನು 3 ವರ್ಷಗಳ ಕಾಲ ಆಡಬಹುದು. ಹೀಗಾಗಿ ಮುಂದಿನ ಒಡಿಐ ವಿಶ್ವಕಪ್ ಆಡುವುದು ಬಹುತೇಕ ಕಷ್ಟವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅವರು ಶೀಘ್ರವೇ ನಿವೃತ್ತಿ ಹೇಳಿದರೂ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ. ವಿರಾಟ್ ಕೊಹ್ಲಿ ಅವರದ್ದು ಇದೇ ಸ್ಥಿತಿ. ಈಗ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಮಯ. 39-40ರ ವಯಸ್ಸಿನಲ್ಲಿ ವಿಶ್ವಕಪ್ ಆಡುವುದು ಬಹುತೇಕ ಅಸಾಧ್ಯ