ರಾಕಿಂಗ್ ಸ್ಟಾರ್ ಯಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಯಶ್ ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿತ್ತಿದ್ದು ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದವರು ಸೇರಿದಂತೆ ಹಲವರು ರಾಕಿ ಬಾಯ್ ಗೆ ವಿಶ್ ಮಾಡುತ್ತಿದ್ದಾರೆ.
ಯಶ್ ಹುಟ್ಟುಹಬ್ಬದಂದೇ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಇನ್ನೂ ಈ ಬಾರಿ ರಾಕಿ ಬಾಯ್ ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ಲಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಯಾರೂ ಕೂಡ ಮನೆ ಬಳಿ ಬಂದು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲು ಮುಂದಾಗಬಾರದು. ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸುವಂತೆ ಅಭಿಮಾನಿಗಳಿಗೆ ಯಶ್ ಮನವಿ ಮಾಡಿದ್ದಾರೆ. ಈ ಮೂಲಕ ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೂ ಕುಟುಂಬಸ್ಥರ ಸಮ್ಮುಖದಲ್ಲಿ ಯಶ್ ಸಿಂಪಲ್ ಆಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳಲಿದ್ದಾರೆ.
ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಇಂದು ಬೆಳಿಗ್ಗೆ 10:25ಕ್ಕೆ ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಟೀಸರ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ 1986 ಜನವರಿ 8ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನಿಸಿದರು. ಅವರ ಮೊದಲ ಹೆಸರು ನವೀನ್ ಕುಮಾರ್ ಗೌಡ. ಅಭಿನಯ ಹಾಗೂ ನಾಟಕದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಮೊದಲು ಧಾರವಾಹಿಗಳಲ್ಲಿ ಗುರುತಿಸಿಕೊಂಡು ನಂತರ ಕನ್ನಡ ಚಿತ್ರರಂಗದಲ್ಲಿ ಮಿಂಚಿದರು. ಬಳಿಕ ಅವರಿಗೆ ಯಶ್ ಎಂದು ಕರೆಯಲಾಯಿತು. ಕೆಜಿಎಫ್ ಚಾಪ್ಟರ್ 1 ಮೂಲಕ ಅವರು ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟ ಎನಿಸಿಕೊಂಡಿದ್ದಾರೆ.