ಸ್ಯಾಂಡಲ್ವುಡ್ನ ಸಿಂಡ್ರೆಲಾ ರಾಧಿಕಾ ಪಂಡಿತ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಮೊದಲು ಯಶ್ ಅವರ ಹುಟ್ಟುಹಬ್ಬವನ್ನು ರಾಧಿಕಾ ಪಂಡಿತ್ ಗೋವಾದಲ್ಲಿ ಸೆಲಬ್ರೇಟ್ ಮಾಡಿದ್ದರು. ಅದೇ ರೀತಿ ನಟ ಯಶ್ ಕೂಡ ರಾಧಿಕಾ ಅವರ ಈ ಬಾರಿಯ ಬರ್ತ್ ಡೇಯನ್ನು ಮಾರ್ಚ್ 7ರಂದು ತುಂಬಾ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಅಲ್ಲದೇ ರಾಧಿಕಾ ಪಂಡಿತ್ಗಾಗಿ ಯಶ್ ಹಾಡಿರುವ ಹಾಡು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಐಶ್ವರ್ಯ ಗೌಡ ವಂಚನೆ ಪ್ರಕರಣ: ವಿನಯ್ ಕುಲಕರ್ಣಿಗೆ ಸಂಕಷ್ಟ? ಕಾರು ಚಾಲಕನಿಂದ ಸ್ಪೋಟಕ ಮಾಹಿತಿ ರಿವೀಲ್!
ಪತ್ನಿ ರಾಧಿಕಾ ಪಂಡಿತ್ ಅವರ ಹುಟ್ಟು ಹಬ್ಬವನ್ನು ತುಂಬಾ ಸ್ಪೆಷಲ್ ಸೆಲೆಬ್ರೇಟ್ ಮಾಡಿದ್ದಾರೆ. ಬರ್ತ್ ಡೇ ನಿಮಿತ್ತ ನಟ ಯಶ್ ಪ್ರೈವೇಟ್ ಇವೆಂಟ್ನಲ್ಲಿ ಮೈಕ್ ಹಿಡಿದು ಹಾಡು ಹಾಡಿದ್ದಾರೆ. ಪತ್ನಿಗಾಗಿ ಲವ್ ಸಾಂಗ್ ಒಂದನ್ನು ರಾಕಿ ಭಾಯ್ ಡೆಡಿಕೇಟ್ ಮಾಡಿದ್ದಾರೆ. ಶಂಕರ್ನಾಗ್ ಅಭಿನಯದ ʻಗೀತಾʼ ಸಿನಿಮಾದ ಸೂಪರ್ ಸಾಂಗ್ ʻಜೊತೆಯಲಿ ಜೊತೆ ಜೊತೆಯಲಿʼ ಹಾಡನ್ನು ರಾಧಿಕಾ ಪಂಡಿತ್ಗಾಗಿ ಯಶ್ ಹಾಡಿದ್ದಾರೆ. ಯಶ್ ಹಾಡು ಕೇಳುತ್ತಿದ್ದಂತೆಯೇ ಇವೆಂಟ್ನಲ್ಲಿ ನೆರೆದಿದ್ದ ಎಲ್ಲರೂ ಫುಲ್ ಖುಷ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಬರೀ ನಟ ಅಷ್ಟೇ ಅಲ್ಲ, ಅದ್ಭುತ ಸಿಂಗರ್ ಕೂಡ ಹೌದು ಅಂತೆಲ್ಲಾ ಅಭಿಮಾನಿಗಳು ಕಾಮೆಂಟ್ಗಳನ್ನು ಮಾಡಿದ್ದಾರೆ