ದರ್ಶನ್ ನಟನೆಯ ‘ಕಾಟೇರ’ (Katera Film) ಸಿನಿಮಾದ ರಿಲೀಸ್ ಆಗೋಕೆ ಕೆಲವೇ ಕೆಲವು ದಿನಗಳು ಬಾಕಿಯಿದೆ. ಈ ಚಿತ್ರದ ಟ್ರೈಲರ್ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಇದೀಗ ಸುದ್ದಿಗೋಷ್ಠಿಯಲ್ಲಿ ‘ಕಾಟೇರ’ ಚಿತ್ರದ ಸ್ಪೆಷಾಲಿಟಿ ಬಗ್ಗೆ ದರ್ಶನ್ ಮಾತನಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera) ಸಿನಿಮಾ ಇದೇ ಡಿ.29ಕ್ಕೆ ರಿಲೀಸ್ ಆಗ್ತಿದೆ. ಟ್ರೈಲರ್ ರಿಲೀಸ್ ಬಗ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಿಹಿಸುದ್ದಿ ನೀಡಿದ್ದಾರೆ. ಸಿನಿಮಾದಲ್ಲಿ ದರ್ಶನ್ (Darshan) ಲುಕ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೀವಿ. ಡಿ.16ಕ್ಕೆ ‘ಕಾಟೇರ’ ಚಿತ್ರದ ಟ್ರೈಲರ್ ರಿಲೀಸ್ ಆಗ್ತಿದೆ. ಇದೇ ತಿಂಗಳು 29ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ನಿರ್ಮಾಪಕನಾಗಿ ಚಿತ್ರ ಹಿಟ್ ಆಗಬೇಕು ಅನ್ನೋ ಆಸೆಯೊಂದಿಗೆ ಚಿತ್ರ ಮಾಡಿದ್ದೇನೆ. ಸಾಕಷ್ಟು ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಎಲ್ಲರೂ ಯಾರನ್ನೋ ಮೆಚ್ಚಿಸೋಕೆ ಮಾತಾಡಿಲ್ಲ. ಪ್ರತಿಯೊಬ್ಬರು ಪ್ರೀತಿಯಿಂದ ಟೀಮ್ ವರ್ಕ್ನಿಂದ ಸಿನಿಮಾ ಮಾಡಿದ್ವಿ. ಈ ಥರ ಸ್ಟ್ರೈಟ್ ಸಬ್ಜೆಕ್ಟ್ ಮಾಡೋದೇ ರಿಸ್ಕ್ ಎಂದಿದ್ದಾರೆ. ಸಿನಿಮಾ ಬಗ್ಗೆ ನಮ್ಮ ನಿರ್ಮಾಪಕರಿಗೆ ಫ್ಯಾಷನ್ ಇದೆ. ಕಥೆ ಕೂಡಲೇ ಇಷ್ಟವಾಯ್ತು ಎಂದು ದರ್ಶನ್ ಮಾಹಿತಿ ಬಿಚ್ಚಿಟ್ಟರು. ಎಲ್ಲರಿಗೂ ಸಿನಿಮಾ ಮೇಲಿನ ಪ್ರೀತಿ ಇಲ್ಲಿಗೆ ಕರೆದುಕೊಂಡು ಬಂದಿದೆ. ಬೀರಾದಾರ್ ಸರ್ ಪಾತ್ರ ತುಂಬಾ ಚೆನ್ನಾಗಿದೆ ಎಂದು ದರ್ಶನ್ ಹೊಗಳಿದ್ದಾರೆ.
ಅದೆಷ್ಟೋ ಕಲಾವಿದರು ಡೈಲಾಗ್ ಹೇಳಿದ್ದರೆ ಅರ್ಥವಾಗಲ್ಲ. ಆದರೆ ಶ್ರುತಿ ಮೇಡಂ ಕಣ್ಣಲ್ಲೇ ಹೆಣ್ಣಿನ ಭಾವನೆ ತೋರಿಸ್ತಾರೆ. ಅಂತಹ ಕಲಾವಿದೆ ಶ್ರುತಿ ಅವರು ಎಂದು ದರ್ಶನ್ ಮೆಚ್ಚಿ ಮಾತನಾಡಿದ್ದರು. ಹೀರೋಯಿನ್ ನೀವು ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ. ಒನ್ ಟೇಕ್ ಆರ್ಟಿಸ್ಟ್ ಎಂದು ಮಾಲಾಶ್ರೀ ಪುತ್ರಿ ಆರಾಧನಾ ಬಗ್ಗೆ ಮಾತನಾಡಿದ್ದಾರೆ