ಹಾಂಕಾಂಗ್: ಇಂಗ್ಲೆಂಡ್ ಇನಿಂಗ್ಸ್ನ ನಾಲ್ಕನೇ ಓವರ್ ನಲ್ಲಿ ಬೋಪಾರಾ ಈ ವಿಶೇಷ ಸಾಧನೆಗೈದಿದ್ದಾರೆ. 3 ಓವರ್ಗಳಲ್ಲಿ ಇಂಗ್ಲೆಂಡ್ ಕೇವಲ 36 ರನ್ ಮಾಡಿತ್ತು. ಆದರೆ ನಾಲ್ಕನೇ ಓವರ್ ನಲ್ಲಿ ಬೋಪಾರಾ, ಉತ್ತಪ್ಪ ಓವರ್ ನಲ್ಲಿ ರನ್ ಮಳೆ ಸುರಿಸಿದರು. ಆ ಓವರ್ನ ಮೊದಲ ಐದು ಎಸೆತಗಳಲ್ಲಿ ಬೋಪಾರ ಐದು ಸಿಕ್ಸರ್ಗಳನ್ನು ಸಿಡಿಸಿದರು, ನಂತರ ಉತ್ತಪ್ಪ ವೈಡ್ ಎಸೆದರು.
Marigold: ಈ ವಿಧಾನ ಅನುಸರಿಸಿ ಚೆಂಡು ಹೂ ಬೆಳೆದರೆ 1 ಎಕರೆಯಲ್ಲಿ ಲಕ್ಷಗಟ್ಟಲೆ ಹಣ ಗಳಿಸಬಹುದು!
ಆದರೂ ಅವರು ಅಂತಿಮ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿ ಓವರ್ ನಲ್ಲಿ 37 ರನ್ ಕಲೆಹಾಕಿದರು. ಈ ಮೂಲಕ, ಬೋಪಾರಾ ಹಾಂಕಾಂಗ್ ಸಿಕ್ಸ್ 2024 ರಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ಭಾರತ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ.
ಉತ್ತಪ್ಪ-ಬಿನ್ನಿ ಆಟ ವ್ಯರ್ಥ
ಬಳಿಕ ಬ್ಯಾಟಿಂಗ್ಗೆ ಇಳಿದ ಭಾರತ ನಿಗದಿತ 6 ಓವರ್ಗಳಲ್ಲಿ 4 ವಿಕೆಟ್ಗೆ 129 ರನ್ಗಳನ್ನು ಮಾತ್ರ ಗಳಿಸಿತು. ನಾಯಕ ರಾಬಿನ್ ಉತ್ತಪ್ಪ 10 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 43 ರನ್ ಮತ್ತು ಸ್ಟುವರ್ಟ್ ಬಿನ್ನಿ11 ಎಸೆತ 44 ಮಿಂಚಿದರೂ ಪ್ರಯೋಜನವಾಗಲಿಲ್ಲ. ಯುಎಇ ಬೌಲರ್ಗಳಲ್ಲಿ ಅಕಿಫ್ ರಾಜಾ, ಸಂಚಿತ್ ಶರ್ಮಾ ಮತ್ತು ಮುಹಮ್ಮದ್ ಜುಹೈಬ್ ವಿಕೆಟ್ ಪಡೆದರು.
ಕೊನೆ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ವಿರುದ್ಧವೂ 44 ರನ್ಗಳಿಂದ ಸೋಲು ಕಂಡಿದೆ. ಕಿವೀಸ್ ಈ ಪಂದ್ಯದಲ್ಲಿ 144 ರನ್ಗಳಿಸಿತ್ತು. ಸಿದ್ದೇಶ್ ಧೀಕ್ಷಿತ್ 55, ರೌನಕ್ ಕಾಪುರ್ 33 ರನ್ಗಳಿಸಿದ್ದರು. ಇದಕ್ಕೆ ಉತ್ತರವಾಗಿ ಭಾರತ 102 ರನ್ಗಳಿಸಿ ಸೋಲು ಕಂಡಿತು.