ಬೆಂಗಳೂರು: ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದಕ್ಕೆ ದರೋಡೆ ಪ್ರಕರಣ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ ಮತ್ತು ಬೀದರ್ ಎಟಿಎಮ್ ದರೋಡೆ ಪ್ರಕರಣದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು,
ಕರ್ನಾಟಕ ಈಗ ಲಾಲು ಪ್ರಸಾದ್ ಯಾದವ್ ರಾಜ್ಯದ ತರಹ ಪ್ರಸಿದ್ಧಿ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೆ ಆಗಿದೆ. ಮಂಗಳೂರಿನಲ್ಲಿ 5 ನಿಮಿಷದಲ್ಲಿ 15 ಕೋಟಿ ರೂ. ಲೂಟಿ ಆಗಿದ್ದು, ಹಾಲಿವುಡ್ ಸಿನಿಮಾ ರೀತಿ ದರೋಡೆ ಆಗಿದೆ ಎಂದು ಕಿಡಿಕಾರಿದರು. ಸಿಎಂ ಮಂಗಳೂರಿನಲ್ಲಿ ಇದ್ದಾಗಲೇ ದರೋಡೆ ಮಾಡಿದ್ದಾರೆ. ಕರ್ನಾಟಕದ ಪೊಲೀಸರ ಬಗ್ಗೆ ಅವರಿಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತದೆ. ಫಟಾಫಟ್ ಅಂತ ರಾಹುಲ್ ಗಾಂಧಿ ಹೇಳಿದ್ದರು,
ಮಹಿಳೆಯರು ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಇಲ್ಲಿ 5 ನಿಮಿಷಗಳಲ್ಲಿ ಫಟಾಫಟ್ ಅಂತ 15 ಕೋಟಿ ರೂ. ಲೂಟಿ ಆಗಿದೆ. ಸಿಎಂ ಸಮಕ್ಷಮದಲ್ಲಿ ದರೋಡೆ ಆಗಿದೆ ಅಂತ ಹೇಳಬಹುದು. ಸಿಎಂ ಆಡಳಿತಕ್ಕೆ ಹಿಡಿದ ಕೈಗನ್ನಡಿ, ಅವರ ಅಸಹಾಯಕತೆಯಿಂದ ಹೀಗೆ ಆಯ್ತು ಅಂತ ಹೇಳಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದರು.