ಯಾದಗಿರಿ : ಬೀದರ್, ಮಂಗಳೂರು ಬಳಿಕ ಯಾದಗಿರಿಯಲ್ಲೊಂದು ರೋಡ್ ರಾಬರಿ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಜ.3ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೆಪ್ಸಿ ಬಾಟಲ್ ನಿಂದ ಹೊಡೆದು ನಾಲ್ಕು ಲಕ್ಷ ದೋಚಿ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. 10 ಜನರ ನಟೋರಿಯಸ್ ಗ್ಯಾಂಗ್ವೊಂದು ಕುರಿ ವ್ಯಾಪಾರಸ್ಥರ ಬೊಲೆರೋ ವಾಹನ ಅಡ್ಡಗಟ್ಟಿ ಹಲೈಗೈದು ಹಣ ದೋಚಿ ಪರಾರಿಯಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಚಟ್ನಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ.
Crime News: ನಕಲಿ ನೋಟು ಮುದ್ರಿಸಿ ಚಲಾವಣೆ ಆರೋಪ: ಅಪ್ಪ, ಮಗ ಅರೆಸ್ಟ್
ತೆಲಂಗಾಣದ ಸೂರ್ಯಪೆಟ್ ನಿಂದ ಕುರಿ ಖರೀದಿಗೆ ಶಹಾಪೂರಕ್ಕೆ ಬರುತ್ತಿದ್ದ ವ್ಯಾಪಾರಸ್ಥರ ಗಾಡಿಯನ್ನು ಅಡ್ಡಗಟ್ಟಿದ ಗುಂಪೊಂದು ಅವರ ಮೇಲೆ ಪೆಪ್ಸಿ ಬಾಟಲ್ನಿಂದ ಹಲ್ಲೆ ಮಾಡಿ, ಅವರ ಬಳಿ ಇದ್ದ ನಾಲ್ಕು ಲಕ್ಷ ಸುಲಿಗೆ ಮಾಡಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆ ನಟೋರಿಯಸ್ ಗ್ಯಾಂಗ್ನ ಹೆಡೆಮುರಿ ಕಟ್ಟಿದ್ದಾರೆ. ಸಿಪಿಐ ಸುನೀಲ್ ಮೂಲಿಮನಿ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಕೃಷ್ಣ, ಸಿದ್ರಮಪ್ಪ, ಯಲ್ಲಪ್ಪ ನನ್ನು ಬಂಧಿಸಿದ್ದು, ಬಂಧಿತರಿಂದ 4 ಲಕ್ಷ ವಶಕ್ಕೆ ಪಡೆದಿದ್ದಾರೆ.