ಬೆಂಗಳೂರು;- ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಧ್ಯರಾತ್ರಿ ಗೂಡ್ಸ್ ಆಟೋ ಚಾಲಕನ ಸುಲಿಗೆ ಮಾಡಿರುವ ಘಟನೆ ಜರುಗಿದೆ.
ಮ್ಯಾನ್ಹೋಲ್ಗೆ ಬಿದ್ದ 2 ವರ್ಷದ ಬಾಲಕ: ಮಗು ರಕ್ಷಿಸಲು ಸತತ ಪ್ರಯತ್ನ!
ಜ.2ರಂದು ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಸಮೀಪ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರದಿಂದ ಗೂಡ್ಸ್ ಆಟೋದಲ್ಲಿ ಇಬ್ಬರು ಬರ್ತಿದ್ದರು. 1 ಗಂಟೆ ಸುಮಾರಿಗೆ ಗೂಡ್ಸ್ ಆಟೋಗೆ ಆರೋಪಿಗಳು, ಅಡ್ಡ ಹಾಕಿದ್ದ ಆರೋಪಿಗಳು, ನೀವು ಆಕ್ಸಿಡೆಂಟ್ ಮಾಡಿದ್ದೀರಿ, ಹಣ ಕೊಡಿ ಎಂದು ಹಲ್ಲೆ ಮಾಡಿ ಮೊಬೈಲ್ ಕಿತ್ಕೊಂಡಿದ್ದಾರೆ. ಬಳಿಕ ಚಾಲಕ ಸೋಮನಾಥ್ ಎಂಬುವರನ್ನ ಆಟೋದಲ್ಲಿ ಕಿಡ್ನಾಪ್ ಮಾಡಿದ್ರು.
ಕುಟುಂಬಸ್ಥರಿಗೆ ಕರೆ ಮಾಡಿಸಿ 4 ಸಾವಿರ ರೂ. ಫೋನ್ ಪೇ ಮಾಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸರಿಂದ ಇಬ್ಬರನ್ನು ಬಂಧಿಸಲಾಗಿದೆ. ಇಮ್ರಾನ್ ಪಾಷಾ ಸೇರಿ ಓರ್ವ ಅಪ್ತಾಪ್ತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.