ಬೆಂಗಳೂರು:- ಇದು ಸಿಲಿಕಾನ್ ಸಿಟಿ ಬೆಂಗಳೂರು ಅಲ್ಲ ಮರ್ರೆ ಗುಂಡಿಗಳ ತವರೂರು. ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಎಷ್ಟೇ ವಿಚಾರ ಮುಟ್ಟಿಸಿದರೂ ಅವರಂತೂ ಎಮ್ಮೆ ಚರ್ಮದಂತೆ ವರ್ತನೆ ಮಾಡುತ್ತಿದ್ದಾರೆ.
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ: ಶುಕ್ರವಾರದ ರಾಶಿ ಭವಿಷ್ಯ 07 ಫೆಬ್ರವರಿ 2025!
ಹೌದು, ಮಳೆಯೇ ಇಲ್ಲದಿದ್ದರೂ ನಗರದ ಈ ಏರಿಯಾದಲ್ಲಿ ನೀರಿನಿಂದ ರಸ್ತೆ ತುಂಬಿದೆ. ನೀರು ತುಂಬಿದ ಹಿನ್ನೆಲೆ ಮೊಣಕಾಲಷ್ಟು ಉದ್ದ ಬಿದ್ದಿರುವ ಗುಂಡಿ ಕಾಣದೆ ಆಟೋ ಪಲ್ಟಿಯಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಆಟೋ ಚಾಲಕ ಬಚಾವ್ ಆಗಿದ್ದಾನೆ.
ಅಂದ್ರಹಳ್ಳಿ ಭಾಗದಲ್ಲಿ ನಿತ್ಯ ಸರ್ವೇ ಸಾಮಾನ್ಯವಾಗಿ ಈ ಘಟನೆ ಜರುಗಿದೆ. ಕಳೆದ 6 ತಿಂಗಳಿನಿಂದಲೂ ಮೋರಿ ನೀರು ಓವರ್ ಫ್ಲೋ ಆಗಿದೆ. ಓವರ್ ಫ್ಲೋ ಆಗಿ ರಸ್ತೆಗೆ ಬಂದು ರಸ್ತೆಯೆಲ್ಲಾ ಮಿನಿ ಕೆರೆಯಾಗಿದೆ. ಮತ್ತೊಂದು ಕಡೆ 50ಕ್ಕೂ ಅಧಿಕ ಗುಂಡಿ ನಿರ್ಮಾಣ ಆಗಿದೆ. ದೊಡ್ದ ದೊಡ್ದ ಗುಂಡಿ ಬಿದ್ದಿದ್ದು, ದುರಸ್ತಿ ಮಾಡುವಂತೆ ಸ್ಥಳೀಯರಿಂದ ಆಗ್ರಹಿಸಲಾಗಿದೆ.