ವಿಜಯಪುರ: ಮಹಾಕುಂಭಮೇಳಕ್ಕೆ ಇದೇ ಶುಭ ಶಿವರಾತ್ರಿ ದಿನದಂದ ತೆರೆ ಬೀಳಲಿದೆ. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳಕ್ಕೆ ದಾಖಲೆ ಲೆಕ್ಕದಲ್ಲಿ ಭಕ್ತರು ಸೇರಿ ಚರಿತ್ರೆಯನ್ನೇ ಬರೆದಿದ್ದಾರೆ. ಇದರ ಬೆನ್ನಲ್ಲೇ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಜಿಲ್ಲೆಯ ಚಡಚಣ ಪಟ್ಟಣದಿಂದ ತೆರಳಿದ್ದ
ಯಾತ್ರಾರ್ಥಿಗಳ ವಾಹನ ಗುಜರಾತ್ ರಾಜ್ಯದ ಪೋರಬಂದರ್ ಸಮೀಪ ನಿಂತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ತಡ ರಾತ್ರಿ ಸಂಭವಿಸಿದೆ.
ದಿನಕ್ಕೆ ಕೇವಲ 70 ರೂ. ಹೂಡಿಕೆಯಿಂದ 3 ಲಕ್ಷ ರೂ. ಗಳಿಸಿ: ಅಂಚೆ ಕಚೇರಿಯ ಬೆಸ್ಟ್ ಸ್ಕೀಮ್ ಇದು!
ಮೃತ ವ್ಯಕ್ತಿಗಳನ್ನು ಪಟ್ಟಣದ ವಿಶ್ವನಾಥ ಅವಜಿ (55) ಹಾಗೂ ಮಲ್ಲಿಕಾರ್ಜುನ ಸದ್ದಲಗಿ (40) ಎಂದು ಗುರುತಿಸಲಾಗಿದೆ. ವಾಹನದಲ್ಲಿ ಒಟ್ಟು 17 ಜನ ಪ್ರಯಾಗ್ರಾಜ್ಗೆ ತೆರಳುತ್ತಿದ್ದರು. ಯಾತ್ರಾರ್ಥಿಗಳಿದ್ದ ವಾಹನ ಮಾರ್ಗ ಮಧ್ಯೆ ನಿಂತಿದ್ದ ಟಿಪ್ಪರ್ಗೆ ಡಿಕ್ಕಿಯಾಗಿದೆ. ವಾಹನದಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಪೋರಬಂದರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.