ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿಯ ಸಂತೆಕಾನೆ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ, ಐವರಿಗೆ ಗಂಭೀರ ಪೆಟ್ಟಾಗಿರುವಂತಹ ಘಟನೆ ನಡೆದಿದೆ..
ಗಾಂಜಾ ಮತ್ತಲ್ಲಿ ನಡೀತಾ ವಕೀಲನ ಮೇಲೆ ಹಲ್ಲೆ!? ಲಾಯರ್ ಜಗದೀಶ್ ಗೆ ಹಿಗ್ಗಾಮುಗ್ಗಾ ತದುಕಲು ಇದೇ ಕಾರಣ!
ಅಪಘಾತದಲ್ಲಿ ಪ್ರಯಾಣಿಸುತ್ತಿದ್ದ ಪುನೀತ್ ಕುಮಾರ(26)
ಸಂಜತ್ (18)
ಭರತ್ (21)
ಆಶೋಕ್ (29)
ಮಹದೇವಪ್ರಸಾದ್ (18) ಎಂಬಾತರೆ ಈ ಅವಘಡದಲ್ಲಿ ಗಂಭೀರವಾದ ಗಾಯಗೊಂಡವರಾಗಿದ್ದಾರೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಸಂತೆಖಾನೆಯ ಸಮೀಪದಲ್ಲಿ ಈ ಘಟನೆ ನಡೆದಿದ್ದು
ಮಹದೇಶ್ವರಬೆಟ್ಟಕ್ಕೆ ಮಾದಪ್ಪನ ದರ್ಶಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು ಅದೃಷ್ಟವಶಾತ್ ಮುಂದಾಗಬಹುದಾಗಿದಂತಹ ಭಾರೀ ಅನಾಹುತ ತಪ್ಪಿದಂತಾಗಿದೆ.
ಮೈಸೂರು ಮೂಲದ ಮಾದಪ್ಪನ ಭಕ್ತರಿದ್ದ ಕೆಎ 51- 5280 ನಂಬರ್ ಐ 20 ಕಾರು ಮತ್ತು ಕೆ ಎ 10 ಎಫ್ 0481ನಂಬರ್ ನ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತವಾದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಇನ್ನೂ ಕಾರಿನಲ್ಲಿದ್ದ ಐವರಿಗೂ ಕೂಡ ಗಂಭಿರ ಪೆಟ್ಟಾಗಿದ್ದು.
ಕೂಡಲೇ ಸ್ಥಳೀಯರು
ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸಗಾಗಿ ರವಾನಿಸಿದ್ದಾರೆ
ಈ ಸಂಬಂಧ ರಾಮಾಪುರ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಡಿದ್ದಾರೆ.