ಬಾಗಲಕೋಟೆ:- ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿಯಲ್ಲಿ ಅಪಘಾತ ಸಂಭವಿಸಿದೆ. ಕಂಟೇನರ್ ಲಾರಿ ಮತ್ತು ಕ್ರೂಸರ್ ನಡುವೆ ಡಿಕ್ಕಿ ಹೊಡೆದಿದೆ.
ಹುಬ್ಬಳ್ಳಿ: ಕೆಸಿಸಿ ಬ್ಯಾಂಕ್ ಸಭಾಭವನದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ!
ಡಿಕ್ಕಿ ರಭಸಕ್ಕೆ ಕ್ರೂಸರ್ ಪಲ್ಟಿ ಹೊಡೆದಿದೆ. ಘಟನೆಯಿಂದ ಹಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಬೇವೂರು ಗ್ರಾಮದಿಂದ ಗೋವಿನಕೊಪ್ಪಕ್ಕೆ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.