ರಾಯಚೂರು:– ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ನಲ್ಲಿ ನಡೆದಿದೆ.
50 ವರ್ಷದ ಹುಸೇನಮ್ಮ ಮೃತ ಮಹಿಳೆ. ಪುಲಮೇಶ್ವರದಿಂದ ಸಿಂಧನೂರು ಕಡೆಗೆ ಹುಸೇನಮ್ಮ, ಮಗ ಹಾಗೂ ಮಗಳೊಂದಿಗೆ ಹೊರಟಿದ್ದರು. ಈ ವೇಳೆ ಲಾರಿಯನ್ನು ಓವರ್ಟೇಕ್ ಮಾಡಲು ಹೋದ ಬೈಕ್ ನಿಯಂತ್ರಣ ತಪ್ಪಿದ್ದು, ಹುಸೇನಮ್ಮ ಕೆಳಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಅಪಘಾತದಲ್ಲಿ ತಾಯಿಯ ದೇಹ ಎರಡು ಭಾಗವಾಗಿದ್ದು, ತಾಯಿಯ ಮೃತದೇಹವನ್ನು ಕಂಡು ರಸ್ತೆಯಲ್ಲೇ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.