ಮಾನ್ವಿ:- ವೇಗವಾಗಿ ಹಿಂಬದಿಯಿಂದ ಬಂದ ಲಾರಿಯೊಂದು ಹಣ್ಣಿನ ವ್ಯಾಪಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹೆಬೂಬ್ ಪಾಶ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾನ್ವಿ ಪಟ್ಟಣದಲ್ಲಿ ಜರುಗಿದೆ.
KRS ಬೃಂದಾವನದಲ್ಲಿ ಕಾವೇರಿ ಆರತಿ ಪ್ರಾರಂಭಕ್ಕೆ ಪ್ಲ್ಯಾನ್: ಸ್ಥಳ ಪರಿಶೀಲಿಸಿದ ಕೃಷಿ ಸಚಿವ!
ಮಹೆಬೂಬ್ ಪಾಶ ಕಳೆದ ಹತ್ತಾರು ವರ್ಷದಿಂದ ತಳ್ಳುವ ಬಂಡಿಯಲ್ಲಿ ಹಣ್ಣಿನ ವ್ಯಾಪಾರಿ ಮಾಡುತ್ತಿದ್ದರು.ಮಹೆಬೂಬ್ ಪಾಶ ದುಡಿದು ತರುವ ಹಣದಲ್ಲಿಯೇ ಜೀವನ ನಡೆಯುತ್ತಿತ್ತು.
ರಾಯಚೂರು ರಸ್ತೆಯಿಂದ ಮಾನ್ವಿ ಪಟ್ಟಣದ ಐಬಿ ವೃತ್ತದವರೆಗೂ ಬರುವ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಾನ್ವಿ ಪಿಐ ವೀರಭದ್ರಯ್ಯ ಹಿರೇಮಠ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.
ಮಹೇಬೂಬ್ ಪಾಶ ವಯಸ್ಸು 50 ವರ್ಷ ಕೆಲಸ ಹಣ್ಣಿನ ವ್ಯಾಪಾರಿ ಊರು ಮಾನ್ವಿ
ಹಣ್ಣಿನ ಪಂಡ್ಡಿ ತೆಗೆದುಕೊಂಡು ರೈಚೂರು ರಸ್ತೆಯಿಂದ ಬರುತ್ತಿರುವಾಗ ಲಾರಿ ವೇಗವಾಗಿ ಬೆನ್ನಿನ ಮೇಲೆ ಏರಿದ ಪರಿಣಾಮ ಸ್ಥಳದಲ್ಲೇ ಮೃತಾಪಟ್ಟಿದ್ದಾನೆ