ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಇದೀಗ ಕೊನೆಯ ಹಂತಕ್ಕೆ ಬಂದಿದೆ. ಸರಣಿಯಲ್ಲಿ ಈಗಾಗಲೇ 4 ಪಂದ್ಯಗಳು ನಡೆದಿದ್ದು, ಆತಿಥೇಯ ಆಸ್ಟ್ರೇಲಿಯಾ 2-1 ರ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಇಂದಿನಿಂದ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯ ನಡೆಯುತ್ತಿದೆ.
ಬ್ಯಾಟರಿ ತೆಗೆಯಲು ಸಾಧ್ಯವಿಲ್ಲದ ಮೊಬೈಲ್ ಹ್ಯಾಂಗ್- ಸ್ಲೋ ಆಗ್ತಿದ್ಯಾ..? ಹಾಗಿದ್ರೆ ಈ ಟಿಪ್ಸ್ ಪಾಲಿಸಿ
ಇನ್ನೂ ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರ ವೇಗದ ಚೆಂಡು ರಿಷಭ್ ಪಂತ್ ಅವರ ಬೈಸೆಪ್ಗೆ ಬಡಿದಿತು. ಚೆಂಡು ತುಂಬಾ ವೇಗವಾಗಿದ್ದು ಅದು ಪಂತ್ ಅವರ ಬೈಸೆಪ್ನಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಿತು. ಕೂಡಲೇ ಮೈದಾನಕ್ಕೆ ಆಗಮನಿಸಿದ ಫಿಸಿಯೋ ಪಂತ್ ಕೈಗೆ ಬ್ಯಾಂಡೇಜ್ ಹಾಕಬೇಕಾಯಿತು. ಸಹಿಸಲಾರದ ನೋವಿನಿಂದ ಬಳಲುತ್ತಿದ್ದರೂ ಪಂತ್ ಮಾತ್ರ ತಮ್ಮ ಆಟವನ್ನು ಮುಂದುವರೆಸಿದರು. ಆದರೆ ಸಿಕ್ಕ ಉತ್ತಮ ಆರಂಭವನ್ನು ಪಂತ್ ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು.
ಇಷ್ಟು ಮಾತ್ರವಲ್ಲದೆ, ಮುಂದಿನ ಕೆಲವು ಎಸೆತಗಳ ನಂತರ ಸ್ಟಾರ್ಕ್ ಅವರ ಒಂದು ಎಸೆತ ಪಂತ್ ಅವರ ಹೆಲ್ಮೆಟ್ ಗೆ ತಾಗಿತು. ಈ ಚೆಂಡಿನ ವೇಗ ಸುಮಾರು 144 ಕಿ.ಮೀ. ಇತ್ತು. ಹೀಗಾಗಿ ಸ್ವಲ್ಪ ಹೊತ್ತು ಪಂದ್ಯವನ್ನು ನಿಲ್ಲಿಸಬೇಕಾಯಿತು. ಮತ್ತೆ ಮೈದಾನಕ್ಕೆ ಓಡಿ ಬಂದ ಫಿಸಿಯೋ ಪಂತ್ ಅವರನ್ನು ತಪಾಸಣೆ ನಡೆಸಿ ಹೆಲ್ಮೆಟ್ ಅನ್ನು ಸಹ ತಪಾಸಣೆ ನಡೆಸಿದರು.