ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿಯಲಿದ್ದಾರೆ. ಈ ಹುದ್ದೆಯನ್ನು ಅಲಂಕರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿದ್ದ ಆಹ್ವಾನವನ್ನು ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್ ತಿರಸ್ಕರಿಸಿದ್ದಾರೆ ಎಂದು ಇತ್ತೀಚಿನ ವರದಿಗಳ ಮೂಲಕ ತಿಳಿದುಬಂದಿದೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದ ರಿಕಿ ಪಾಂಟಿಂಗ್, ಇತ್ತೀಚಿನ ಸಂದರ್ಶನ ಒಂದರಲ್ಲಿ ತಮಗೆ ಭಾರತ ತಂಡದ ಮುಖ್ಯ ಕೋಚ್ ಆಗಲು ಆಸಕ್ತಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ನಿಟ್ಟಿನಲ್ಲಿ ಬಿಸಿಸಿಐ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಹೇಳಿಕೊಂಡಿದ್ದಾರೆ.
Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI.! ʻಆಧಾರ್ʼ ದುರ್ಬಳಕೆ ಮಾಡಿದ್ರೆ ಕಾದಿದೆ ಕಠಿಣ ಶಿಕ್ಷೆ
“ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗುವ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿರುವುದನ್ನು ಗಮನಿಸಿದ್ದೇನೆ. ನನ್ನ ಅರಿವಿಗೆ ಇಲ್ಲದೆ ಈ ರೀತಿಯ ಸುದ್ದಿಗಳು ಹೇಗೆ ಆನ್ಲೈನಲ್ಲಿ ಇಷ್ಟು ಬೇಗ ಹರಿದಾಡುತ್ತವೆ ಎಂಬುದೇ ಅರ್ಥವಾಗಲಿಲ್ಲ. ಐಪಿಎಲ್ ಟೂರ್ನಿ ವೇಳೆ ಕೆಲ ಗುಪ್ತ ಆಲೋಚನೆ ನಡೆಸಲಾಯಿತು. ಭಾರತ ತಂಡದ ಕೋಚ್ ಆಗುವ ಆಸಕ್ತಿ ಇದೆಯೇ ಎಂಬುದರ ಬಗ್ಗೆ ತಿಳಿದುಕೊಳ್ಳಲಾಯಿತು,” ಎಂದು ಐಸಿಸಿಗೆ ನೀಡಿರುವ ಸಂದರ್ಶನದಲ್ಲಿ ರಿಕಿ ಪಾಂಟಿಂಗ್ ಹೇಳಿಕೊಂಡಿದ್ದಾರೆ.
ಟೀಮ್ ಇಂಡಿಯಾ ಕೋಚ್ ಆಗಬೇಕಾದರೆ ರಿಕಿ ಪಾಂಟಿಂಗ್ ತಮ್ಮ ಈಗಿನ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಒಪ್ಪಂದವನ್ನು ಕೈಬಿಡಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತ ತಂಡದ ಜವಾಬ್ದಾರಿ ಹೊರಲು ತಮಗೆ ಇಷ್ಟವಿಲ್ಲ ಎಂದು ಪಂಟರ್ ಹೇಳಿಕೊಂಡಿದ್ದಾರೆ. “ಟೀಮ್ ಇಂಡಿಯಾ ಕೋಚ್ ಆಗುವ ಬಯಕೆ ನನ್ನಲ್ಲೂಇದೆ. ಆದರೆ, ಈ ಜವಾಬ್ದಾರಿ ಹೊರಲು ನನ್ನ ಉಳಿದ ಜವಾಬ್ದಾರಿಗಳನ್ನು ಬಿಡಬೇಕಾಗುತ್ತದೆ.
ಇದು ನನ್ನ ಆಸಕ್ತೊಗೆ ಅಡ್ಡಿಪಡಿಸುತ್ತದೆ. ನನಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟ. ಟೀಮ್ ಇಂಡಿಯಾ ಕೋಚ್ ಆದರೆ ಬಿಡುವಿನ ಸಮಯ ಇರುವುದಿಲ್ಲ. ಐಪಿಎಲ್ ತಂಡದ ಸೇವೆಗೂ ಹಾಜರಾಉವಂತ್ತಿಲ್ಲ. ರಾಷ್ಟ್ರೀಯ ತಂಡ ಕೋಚ್ ಆದರೆ ವರ್ಷದಲ್ಲಿ 10-11 ತಿಂಗಳು ಸಮಯ ಕೆಲಸವಿರುತ್ತದೆ. ಹೀಗಾಗಿ ಭಾರತ ತಂಡ ಕೋಚ್ ಹುದ್ದೆ ಅಲಂಕರಿಸಲು ಬಯಕೆ ಇದ್ದರೂ ಅದನ್ನು ತೆಗೆದುಕೊಳ್ಳದ ಪರಿಸ್ಥಿತಿಯಲ್ಲಿದ್ದೇನೆ,” ಎಂದಿದ್ದಾರೆ.