ತುಮಕೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರೆ ಒಂದು ಲಕ್ಷ ಬಹುಮಾನ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ. ನಾಳೆ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸವಲತ್ತು ವಿತರಣೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಇದೇ ಕಾರ್ಯಕ್ರಮದ ವೇಳೆ ಅನುದಾನ ತಾರತಮ್ಯ ವಿರೋಧಿಸಿ ಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿ ಜೆಡಿಎಸ್ ಶಾಸಕರು ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಇದೇ ವಿಚಾರವಾಗಿ ಮಾಜಿ ಶಾಸಕ ಗೌರಿಶಂಕರ್ ಸುದ್ದಿಗೋಷ್ಠಿ ನಡೆಸಿ, ಸಿಎಂ ಸಿದ್ದರಾಮಯ್ಯ ಸಮಾರಂಭಕ್ಕೆ ಬಿಜೆಪಿ ಧಿಕ್ಕಾರ ಕೂಗಿ ತಡೆಯೊಡ್ಡಲು ಪ್ಲಾನ್ ಮಾಡಿದೆ ಎಂದು ಆರೋಪಿಸಿದ್ದು, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಮಾತಾನಾಡಿರುವ ಆಡಿಯೋ ಪ್ಲೇ ಮಾಡಿದ್ದಾರೆ. ಡಿಸೆಂಬರ್ 2 ನೇ ತಾರಿಕು ಪಂಚಾಯತಿಗೆ ಬಸ್ ಕಳಿಸುತ್ತೇನೆ ಎಲ್ಲರೂ ಹೋರಾಟ ಮಾಡಬೇಕು. ಗ್ರಾಪಂ ಅಧ್ಯಕ್ಷರು ಕಪ್ಪು ಬಾವುಟ ಹಾರಿಸಬೇಕು. ಭಾಷಣ ಮಾಡುವಾಗ ಸಿದ್ದರಾಮಯ್ಯ ಗೆ ಧಿಕ್ಕಾರ ಕೂಗಿ. ಧಿಕ್ಕಾರ ಕೂಗಿದವರಿಗೆ ಒಂದು ಲಕ್ಷ ಬಹುಮಾನ ಘೋಷಣೆ ಮಾಡ್ತೇವೆ. ಎಲ್ಲಾ ಮೀಡಿಯಾ ಆಗ ಡೈವರ್ಷನ್ ಆಗುತ್ತೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ. ನಮ್ಮ ಕಾರ್ಯಕರ್ತರು ಘೋಷಣೆ ಕೂಗಬೇಕು, ಅದನ್ನ ಗಮನಿಸಿ ಎಷ್ಟು ಜನರು ಕೂಗ್ತಾರೋ ಅವರಿಗೆ ಒಂದು ಲಕ್ಷ , ಐವತ್ತು ಸಾವಿರ ಬಹುಮಾನ ಘೋಷಣೆ ಮಾಡುತ್ತೇವೆ ಎಂದು ಆಡಿಯೋದಲ್ಲಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ವಿರೋಧವ್ಯಕ್ತಪಡಿಸಿ, ಯಾರು ಕೂಗ್ತಾರೋ ಅವರಿಗೆ ಒಂದು ಲಕ್ಷ 50 ಸಾವಿರ ನಗದು ಬಹುಮಾನ ಘೋಷಣೆ ಎಷ್ಟು ಸರಿ ಎಂದು ಗೌರಿ ಶಂಕರ್ ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಕೂರು ಜಿಲ್ಲಾ ಎಸ್ ಪಿ ಗೆ ದೂರು ನೀಡಲು ಜಿಲ್ಲಾ ಕಾಂಗ್ರೆಸ್ ಘಟಕ. ಮುಂದಾಗಿದೆ.