ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೆಂದ್ರ, ಜಾರಕಿಹೊಳಿ ನಡುವೆ ವಾಕ್ ಸಮರ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಲಾಯಕ್ ಇಲ್ಲ ಎಂದು ಯತ್ನಾಳ್ ಪುನರುಚ್ಛರೀಸಿದ್ದಾರೆ. ಅವನನ್ನ ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು ಇವನಿಂದಲೇ ಸುನಿಲ್ ಕುಮಾರ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಅಂತಾ ಇದೆ.
ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ನಾವು ಉತ್ತರ ಕರ್ನಾಟಕದ ಜನ ಹಿಂಗೇ ಇದ್ದೇವಿ. ಸತೀಶ್ ಜಾರಕಿಹೊಳಿ ಹೇಳಿದ್ದಾಗ ಕೂಡ ನಾನು ಒಬ್ಬನೇ ಹೋಗುತ್ತೇನೆ ಎಂದಿದ್ದ. ನಾವು ಯಾರಿಗೂ ಹೆದರಲ್ಲ, ಜಾರಕಿಹೊಳಿ ಪರವಾಗಿ ನಾವಿದ್ದೇವೆ. ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡ್ಡಿಯೂರಪ್ಪ ಜೇಲಿಗೆ ಹೋದ. ಯಡಿಯೂರಪ್ಪಗೆ ಹೊರಗಡೆ ಪೂಜ್ಯ ತಂದೆ ಅಂತಾನೇ, ಮನೆಯಲ್ಲಿ ಮುದಿಯಾ ಅಂತಾ ಕರಿತಾನೆ. ಅವನಿಂದಲೇ ಯಡ್ಡಿಯೂರಪ್ಪ ಹಾಳಾಗಿದ್ದು, ಯಡ್ಡಿಯೂರಪ್ಪ ಮಗನ ವ್ಯಾಮೋಹ ಬಿಡಲಿ
ಯಡ್ಡಿಯೂರಪ್ಪ ಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಯಡ್ಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿ ಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿದ್ದಾನೆ. ಯಡ್ಡಿಯೂರಪ್ಪ ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನ ಮಣ್ಣಲ್ಲಿಟ್ರೂ ಎಂದು ಏಕವಚದಲ್ಲಿ ವಾಗ್ದಾಳಿ ನಡೆಸಿದರು. ಯಡ್ಡಿಯೂರಪ್ಪ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ವ್ಯಂಗ್ಯವಾಡಿದರು.